Select Your Language

Notifications

webdunia
webdunia
webdunia
webdunia

ಗೆಳೆತಿಯೊಂದಿಗಿನ ಸಂಬಂಧ ಬ್ರೇಕ್ ಮಾಡಲು ಮಗನ ನಿರಾಕರಿಸಿದ್ದಕ್ಕೆ ತಂದೆ ಮಾಡಿದ್ದೇನು ಗೊತ್ತಾ?

ಗೆಳೆತಿಯೊಂದಿಗಿನ ಸಂಬಂಧ ಬ್ರೇಕ್ ಮಾಡಲು ಮಗನ ನಿರಾಕರಿಸಿದ್ದಕ್ಕೆ ತಂದೆ ಮಾಡಿದ್ದೇನು ಗೊತ್ತಾ?
ಚೆನ್ನೈ , ಮಂಗಳವಾರ, 15 ಡಿಸೆಂಬರ್ 2020 (06:53 IST)
ಚೆನ್ನೈ : ತನ್ನ ಗೆಳತಿಯೊಂದಿಗೆ ಬೇರೆಯಾಗಲು ಮಗ ನಿರಾಕರಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕ ಮಗನ  ಬೈಕ್ ಪಕ್ಕ ನಿಲ್ಲಿಸಿದ್ದ 7 ಬೈಕ್ ಗಳನ್ನು ಪೆಟ್ರೋಲ್ ಹಾಕಿ ಸುಟ್ಟ ಘಟನೆ ತಮಿಳುನಾಡಿನ ಚೆನ್ನೈ ನ ನ್ಯೂ ವಾಷರ್ ಮ್ಯಾನ್ ಪೇಟೆ ಪ್ರದೇಶದಲ್ಲಿ ನಡೆದಿದೆ.

ಮಗ ಯುವತಿಯೊಬ್ಬಳ ಜೊತೆ ಸಂಬಂಧದಲ್ಲಿದ್ದ. ಇದು ತಂದೆಗೆ ಇಷ್ಟವಾಗದ ಕಾರಣ ಈ ಸಂಬಂಧವನ್ನು ಬಿಟ್ಟುಬಿಡುವಂತೆ ಹೇಳಿದ್ದಾನೆ. ಆದರೆ ಮಗ ಅದನ್ನು ನಿರಾಕರಿಸಿ ಯುವತಿಯೊಂದಿಗೆ ಬೈಕ್ ನಲ್ಲಿ ಸುತ್ತುತ್ತಿದ್ದ. ಇದರಿಂದ ಕೋಪಗೊಂಡ ತಂದೆ ಅಪಘಾತವೆಂದು ಬಿಂಬಿಸಲು ಮಗನ ಬೈಕ್ ಸುಡುವ ಬದಲು ಪಕ್ಕದಲ್ಲಿದ್ದ 7 ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ಹಿನ್ನಲೆಯಲ್ಲಿ ಆರೋಪಿ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೋಡಿಹಳ್ಳಿ ವಿರುದ್ಧ ಬಿಜೆಪಿ ನಾಯಕರು ಕಿಡಿ