Select Your Language

Notifications

webdunia
webdunia
webdunia
webdunia

ಒಂದೇ ತಿಂಗಳಲ್ಲಿ ಇಂಡಿಯನ್ 2 ಚಿತ್ರದ ಚಿತ್ರೀಕರಣ ಮುಗಿಸಲಿದ್ದಾರಂತೆ ಕಮಲ್ ಹಾಸನ್. ಯಾಕೆ ಗೊತ್ತಾ?

ಒಂದೇ ತಿಂಗಳಲ್ಲಿ ಇಂಡಿಯನ್ 2 ಚಿತ್ರದ ಚಿತ್ರೀಕರಣ ಮುಗಿಸಲಿದ್ದಾರಂತೆ ಕಮಲ್ ಹಾಸನ್. ಯಾಕೆ ಗೊತ್ತಾ?
ಚೆನ್ನೈ , ಸೋಮವಾರ, 14 ಡಿಸೆಂಬರ್ 2020 (12:45 IST)
ಚೆನ್ನೈ : ಇಂಡಿಯನ್ 1996ರಲ್ಲಿ ಶಂಕರ್ ನಿರ್ದೇಶನದ ಮತ್ತು ಕಮಲ್ ಹಾಸನ್ ನಟಿಸಿದ ಚಿತ್ರ. ವಿಭಿನ್ನ ಕಥಾ ಹಂದರದಲ್ಲಿ ರೂಪುಗೊಂಡ ಈ ಚಿತ್ರವು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು ಮತ್ತು ಯಶಸ್ಸು ಕಂಡಿತ್ತು.

ಆನಂತರ ಇದೀಗ ಮತ್ತೆ ಈ ಮೈತ್ರಿ ಕೈಜೋಡಿಸಿ ಇಂಡಿಯನ್ 2 ಚಿತ್ರವನ್ನು ರೂಪಿಸಿದೆ. ಆದರೆ ಶೂಟಿಂಗ್ ಸಮಯದಲ್ಲಿ ಕ್ರೇನ್ ಬಿದ್ದು 3 ಜನರು ಸಾವನಪ್ಪಿದ್ದಾರೆ. ಇದರಿಂದ ಕಮಲ್ ಹಾಸನ್ ಮತ್ತು ನಿರ್ಮಾಣ ಸಂ‍ಸ್ಥೆ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಇದರ ನಂತರ ಚಿತ್ರೀಕರಣ ಪ್ರಾರಂಭವಾಗಲಿಲ್ಲ.

ಆದರೆ ಕಮಲ್ ಹಾಸನ್ ಅವರು ಜನವರಿ 2021ರ ಕೊನೆಯಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ನಡೆಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ಬರಲಿದ್ದು, ಒಂದೇ ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಪ್ರಚಾರ ನಡೆಸಲು ಯೋಜಿಸಿದ್ದಾರೆ ಎನ್ನಲಾಗಿದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಟರ್ ಚಿತ್ರದ ಗೆಲುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿದ ನಟ ವಿಜಯ್