Select Your Language

Notifications

webdunia
webdunia
webdunia
webdunia

ವೈದ್ಯರನ್ನು ಭೇಟಿ ಮಾಡಲು ಬಂದ ರೋಗಿಗೆ ಸಿಬ್ಬಂದಿ ಮಾಡಿದ್ದೇನು ಗೊತ್ತಾ?

ವೈದ್ಯರನ್ನು ಭೇಟಿ ಮಾಡಲು ಬಂದ ರೋಗಿಗೆ ಸಿಬ್ಬಂದಿ ಮಾಡಿದ್ದೇನು ಗೊತ್ತಾ?
ಕೇರಳ , ಬುಧವಾರ, 18 ನವೆಂಬರ್ 2020 (06:03 IST)
ಕೇರಳ : 19 ವರ್ಷದ ಕೋವಿಡ್ ರೋಗಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿ ಮಾನಭಂಗ ಎಸಗಲು ಯತ್ನಿಸಿದ ಘಟನೆ ಕೇರಳದ ಕೊಜಿಕೋಡ್ ಜಿಲ್ಲೆಯ ಉಲ್ಲೇರಿ ಪ್ರದೇಶದ ಮಲಬಾರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಕೋವಿಡ್ ರೋಗಿಯ ವಾಟ್ಸ್ ಆಪ್ ನಂಬರ್ ತೆಗೆದುಕೊಂಡ ಸಿಬ್ಬಂದಿ ಆಕೆಗೆ ವೈದ್ಯರನ್ನು ಭೇಟಿ ಮಾಡುವಂತೆ ತಿಳಿಸಿ ಮೆಸೇಜ್ ಮಾಡಿದ್ದಾನೆ. ಬಳಿಕ ಆಕೆ ವೈದ್ಯರನ್ನು ಭೇಟಿ ಮಾಡಲು ಲಿಫ್ಟ್ ನಲ್ಲಿ ತೆರಳುತ್ತಿದ್ದಾಗ, ಅವಳನ್ನು ಲಿಫ್ಟ್ ನಿಂದ ಹೊರಗೆಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ.

ಆತನಿಂದ ತಪ್ಪಿಸಿಕೊಂಡ ರೋಗಿಯು ಆಸ್ಪತ್ರೆಯ ಇತರ ಸಿಬ್ಬಂದಿಗಳ ಬಳಿ ಬಂದು ಮಾಹಿತಿ ನೀಡಿದ್ದಾಳೆ. ತಕ್ಷಣ ಎಲ್ಲರೂ ಸೇರಿ ಸಿಬ್ಬಂದಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಮತ್ತು ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಪ್ರಿಯತಮೆಯನ್ನು ಚಾಕುವಿನಿಂದ ಇರಿದ ಯುವಕ