ವಿಶಾಖಪಟ್ಟಣ : ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವತಿಯ ಮೇಲೆ ಪತ್ನಿ ಎಸಿಡ್ ಎರಚಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಗಜುವಾಕಾ ಪ್ರದೇಶದಲ್ಲಿ ನಡೆದಿದೆ.
ವರದಿ ಪ್ರಕಾರ ಮಹಿಳೆಯ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸಂತ್ರಸ್ತೆಗೆ ಪತ್ನಿ ಅನೇಕ ಬಾರಿ ಎಚ್ಚರಿಕೆ ನೀಡಿದ್ದಾಳೆ. ಆದರೆ ಆಕೆಯ ಮಾತನ್ನು ಕೇಳದಿದ್ದಾಗ ಇಬ್ಬರ ನಡುವೆ ಜಗಳ ನಡೆದು ಕೋಪಗೊಂಡ ಪತ್ನಿಯು ಯುವತಿಯ ಮುಖಕ್ಕೆ ಎಸಿಡ್ ಎರಚಿದ್ದಾಳೆ.
ಈ ಘಟನೆಯಲ್ಲಿ ಸಂತ್ರಸ್ತೆಯ ದೇಹ ಶೇ.30ರಷ್ಟು ಸುಟ್ಟು ಹೋಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಂತ್ರಸ್ತೆ ದೂರು ನೀಡದ ಹಿನ್ನಲೆಯಲ್ಲಿ ಆರೋಪಿ ಪತ್ನಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.