ಸೆಲ್ಫಿ ಫೋಟೋ ಡಿಲೀಟ್ ಮಾಡಲು ಒಪ್ಪದ ಪ್ರಿಯಕರನಿಗೆ ಪ್ರಿಯತಮೆ ಮಾಡಿದ್ದೇನು ಗೊತ್ತಾ?

Webdunia
ಸೋಮವಾರ, 13 ಮೇ 2019 (06:50 IST)
ಚೆನ್ನೈ : ಅಮೆರಿಕ ಮೂಲದ ಮಹಿಳೆ ಯೊಬ್ಬಳು ಸೆಲ್ಫಿ ಫೋಟೋ  ಡಿಲೀಟ್ ಮಾಡಲು ಒಪ್ಪದ ಪ್ರಿಯಕರರನ್ನು ಅಪಹರಿಸಿ, ಲೂಟಿ ಮಾಡಿಸಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.




ನವೀನ್ ಅಹ್ಮದ್  ಕಿಡ್ನ್ಯಾಪ್ ಆದ ಪ್ರಿಯಕರ. ಈತ ಅಮೆರಿಕ ಮೂಲದ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದು, ಇತ್ತೀಚೆಗೆ ಇಬ್ಬರು ಹೋಟೆಲ್ ಗೆ ಹೋದಾಗ ನವೀನ್ ಗೆಳತಿಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಇದರಿಂದಾಗಿ ಕೋಪಗೊಂಡ ಮಹಿಳೆ ಆತನ ಜೊತೆಗೆ ಇರುವ ಸೆಲ್ಫಿ ಫೋಟೋವನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಆತ ಒಪ್ಪದಿದ್ದದ್ದಕ್ಕೆ ಕೋಪಗೊಂಡ ಮಹಿಳೆ ನಾಲ್ಕು ಜನರಿಗೆ ಸುಪಾರಿ ಕೊಟ್ಟು ನವೀನ್ ಅಹ್ಮದ್‍ ನನ್ನು ಅಪಹರಣ  ಮಾಡಿಸಿ ಆತನ ಬಳಿ ಇದ್ದ ಐಪ್ಯಾಡ್, ವಾಚ್ ಹಾಗೂ ಬೆಲೆ ಬಾಳುವ ವಸ್ತುವನ್ನು ದೋಚಿ ಪರಾರಿಯಾಗಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್  ಟಿಪಿ ಚತ್ರಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ನಲ್ಲಿ ಕುರ್ಚಿ ಜಟಾಪಟಿ ನಡುವೆ ರಾಷ್ಟ್ರೀಯ ನಾಯಕರ ಭೇಟಿಯಾದ ವಿಜಯೇಂದ್ರ

ಸಿಎಂ ಆಗಲು ಮತ್ತೊಂದು ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್

ನಿಮ್ಮ ಸಿಎಂ ಯುದ್ಧಕ್ಕೆ ಬಿಜೆಪಿ ಹೇಗೆ ಕಾರಣವಾಗುತ್ತೆ: ರಣದೀಪ್ ಸುರ್ಜೇವಾಲಗೆ ಆರ್ ಅಶೋಕ್ ಪ್ರಶ್ನೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments