Webdunia - Bharat's app for daily news and videos

Install App

ಮದುವೆಗಾಗಿ ಅಲಂಕಾರ ಮಾಡಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಹೋದ ವಧುಗೆ ಆಗಿದ್ದೇನು ಗೊತ್ತಾ?

Webdunia
ಭಾನುವಾರ, 27 ಜನವರಿ 2019 (07:30 IST)
ಪಂಜಾಬ್ : ಮದುವೆಗಾಗಿ ಅಲಂಕಾರ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಬಂದಿದ್ದ ವಧುವನ್ನು ದುಷ್ಕರ್ಮಿಗಳ ಗುಂಪೊಂದು ಬಲವಂತವಾಗಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುವ ಘಟನೆ ಪಂಜಾಬ್ ನ ಮುಕ್ತಸ್ಸಾರ್ ಪ್ರದೇಶದಲ್ಲಿ ನಡೆದಿದೆ.



ತನ್ನ ವಿವಾಹ ಇನ್ನು ಕೆಲ ಹೊತ್ತಿನಲ್ಲೇ ನಡೆಯಲಿದ್ದ ಕಾರಣ ವಧು, ಅಲಂಕಾರ ಮಾಡಿಸಿಕೊಳ್ಳಲು ಬೆಳಗಿನ ಜಾವವೇ ಬ್ಯೂಟಿ ಪಾರ್ಲರ್ ಒಂದಕ್ಕೆ ತೆರಳಿದ್ದಳು. ಆ ವೇಳೆ ದುಷ್ಕರ್ಮಿಗಳ ತಂಡ ಬ್ಯೂಟಿ ಪಾರ್ಲರ್ ಮುಂದೆ ಕಾದು ಕುಳಿತು, ವಧು ಹೊರ ಬರುತ್ತಲೇ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆಗ ಆಕೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯನ್ನು ಕಾರಿನ ತನಕ ಎಳೆದೊಯ್ದು ತಮ್ಮ ಕಾರಿಗೆ ಹಾಕಿಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.


ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಯುವತಿಯನ್ನು ರಕ್ಷಿಸಿದ್ದಾರೆ. ಹಾಗೇ ಈ ಪ್ರಕರಣಕ್ಕೆ ಸಂಬಂಧಪಟ್ಟ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಇನ್ನುಳಿದವರಿಗಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದ್ವಿಚಕ್ರ ವಾಹನ ಸವಾರರಿಗೆ ಯೋಗಿ ಸರ್ಕಾರ ಶಾಕ್‌: ಇನ್ನು ಮುಂದೆ ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಸಿಗಲ್ಲ

ಹೈಕಮಾಂಡ್‌ ಮೆಚ್ಚಿಸಲು ಡಿಕೆ ಶಿವಕುಮಾರ್‌ ಹೀಗೇ ನಡೆದುಕೊಳ್ಳುತ್ತಿದ್ದಾರೆ: ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್ ಹಾಗೇ ಹೇಳಬಾರದಿತ್ತು: ಮಲ್ಲಿಕಾರ್ಜುನ ಖರ್ಗೆ

ಭೀಕರ ಪ್ರವಾಹಕ್ಕೆ ತುತ್ತಾದ ಜಮ್ಮು ಪ್ರದೇಶದಿಂದ 5000 ಸಾವಿರ ಮಂದಿ ಸ್ಥಳಾಂತರ

ಎಸ್‌ಐಟಿ ಶೋಧದ ವೇಳೆ ಮಹೇಶ್ ಶೆಟ್ಟಿ ಮನೆಯಲ್ಲಿ ಸಿಕ್ತು ಊಹಿಸಲಾಗದ ವಸ್ತು

ಮುಂದಿನ ಸುದ್ದಿ
Show comments