Publish Date: Wed, 29 Jul 2020 (08:01 IST)
Updated Date: Wed, 29 Jul 2020 (08:04 IST)
ನವದೆಹಲಿ : ಗಾಂಜಾ ಸಿಗಲಿಲ್ಲವೆಂದು 28 ವರ್ಷದ ಯುವಕನೊಬ್ಬ ಚಾಕುವನ್ನು ನುಂಗಿದ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ.
ಯುವಕ ಚಾಕು ನುಂಗಿ ಒಂದು ತಿಂಗಳ ಬಳಿಕ ಆತನಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಎಕ್ಸ್ ರೇ ಮಾಡಿದಾಗ 20ಸೆಂ.ಮೀ. ಉದ್ದದ ಚಾಕುವಿರುವುದು ತಿಳಿದುಬಂದಿದೆ.
ತಕ್ಷಣ ಆತನಿಗೆ ವೈದ್ಯರು 3-4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಚಾಕುವನ್ನು ಹೊರತೆಗೆದಿದ್ದಾರೆ. ಈಗ ಆತನ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.