ಅಯೋಧ್ಯೆ : ಈ ಹಿಂದೆ ಬಾಬ್ರಿ ಮಸೀದಿ ಧ್ವಂಸದ ಸಮಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ರಾಮಲಲ್ಲಾ ಮೂರ್ತಿಯನ್ನು ಈಗ ಪ್ರತಿಷ್ಠಾಪಿತವಾಗುತ್ತಿರುವ 51 ಇಂಚಿನ ಮೂರ್ತಿಯ ಎದುರು ಸ್ಥಾಪಿಸಲಾಗುವುದು. ಮೂಲ ಮೂರ್ತಿ ಕೇವಲ ಆರು ಇಂಚು ಎತ್ತರವಿದ್ದು, ಮೂವತ್ತು ಅಡಿ ದೂರದಿಂದ ಕಾಣುತ್ತಲೇ ಇರಲಿಲ್ಲ.
ಈ ಹಿಂದೆ ಪೂಜೆಗೊಳಗಾಗುತ್ತಿದ್ದ ಎರಡು ಪ್ರತಿಮೆಗಳಿಗೆ ದೇಗುಲದ ಮೊದಲ ಮಹಡಿ ಹಾಗೂ ಎರಡನೇ ಮಹಡಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದಲ್ಲಧೇ ಮುಂಬೈ ಮೂಲದ ಕಲಾವಿದ ಗಣೇಶ್ ಭಟ್ ಮತ್ತು ರಾಜಸ್ಥಾನ ಮೂಲದ ಸತ್ಯ ನಾರಾಯಣ ಅವರು ರಚಿಸಿದ್ದ ರಾಮಲಲ್ಲಾ ಮೂರ್ತಿಗಳಿಗೂ ಸಹ ದೇಗುಲದಲ್ಲಿ ಅವಕಾಶ ಕಲ್ಪಿಸುವುದಾಗಿ ಟ್ರಸ್ಟಿಗಳು ತಿಳಿಸಿದ್ದಾರೆ.