Select Your Language

Notifications

webdunia
webdunia
webdunia
webdunia

ಹಳೇ ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಚಿಂತೆ ಬೇಡ

ಹಳೇ ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಚಿಂತೆ ಬೇಡ
ನವದೆಹಲಿ , ಶನಿವಾರ, 4 ನವೆಂಬರ್ 2017 (09:13 IST)
ನವದೆಹಲಿ: ಅಮಾನ್ಯಗೊಂಡ ಹಳೇ 500 ಮತ್ತು 1000 ರೂ. ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಇನ್ನು ಚಿಂತೆ ಬೇಡ. ಹಳೇ ನೋಟು ಇಟ್ಟುಕೊಂಡವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

 
ಹಳೇ ನೋಟುಗಳನ್ನು ಠೇವಣಿ ಇಡಲು ಇನ್ನೊಂದು ಅವಕಾಶ ನೀಡಿ ಎಂಬ ಮನವಿ ವಿಚಾರಣೆ ಸಂದರ್ಭದಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಹಳೆ ನೋಟು ಇಟ್ಟುಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಿಲ್ಲ ಎಂದಿದೆ.

ಇದುವರೆಗೆ ಹಳೆ ನೋಟುಗಳನ್ನು ಕಾರಣಾಂತರಗಳಿಂದಾಗಿ ಬದಲಾಯಿಸಲು ಸಾಧ್ಯವಾಗದೇ ಇರುವವರು ಭಯದಲ್ಲೇ ಇದ್ದರು. ಆದರೆ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದ ಮೇಲೆ ನಿರಾಳವಾದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮಮತಾ ಬ್ಯಾನರ್ಜಿ ಬಲಗೈ ಬಂಟ ಬಿಜೆಪಿ ಪಕ್ಷಕ್ಕೆ ಸೇರ್ಪಡೆ