Select Your Language

Notifications

webdunia
webdunia
webdunia
webdunia

ಡಿಎಂಕೆ ಶಾಸಕರ ರಾಜೀನಾಮೆ: ತಮಿಳುನಾಡು ವಿಧಾನಸಭೆ ವಿಸರ್ಜನೆ ಸಾಧ್ಯತೆ

ಡಿಎಂಕೆ ಶಾಸಕರ ರಾಜೀನಾಮೆ: ತಮಿಳುನಾಡು ವಿಧಾನಸಭೆ ವಿಸರ್ಜನೆ ಸಾಧ್ಯತೆ
ಚೆನ್ನೈ , ಮಂಗಳವಾರ, 19 ಸೆಪ್ಟಂಬರ್ 2017 (12:52 IST)
ತಮಿಳುನಾಡು ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿದ್ದು, ಡಿಎಂಕೆ ಶಾಸಕರಿಂದ ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಟಿಟಿವಿ ದಿನಕರನ್ ಪರ ಎಐಎಡಿಎಂಕೆ ಪಕ್ಷದ 18 ಬಂಡಾಯ ಶಾಸಕರನ್ನು ಸಭಾಪತಿ ಧನಪಾಲ್, ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ, ಡಿಎಂಕೆ ಶಾಸಕರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಡಿಎಂಕೆ ವಕ್ತಾರರು ತಿಳಿಸಿದ್ದಾರೆ.
 
ಒಂದು ವೇಳೆ, ಡಿಎಂಕೆ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿದಲ್ಲಿ ನಿಧಾನಸಭೆ ವಿಸರ್ಜಿಸುವುದು ಅನಿವಾರ್ಯವಾಗುತ್ತದೆ 
 
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಗೆ ರಾಜಕೀಯದ ಪ್ರತಿತಂತ್ರ ಹೆಣೆಯಲು ಸಿದ್ದವಾಗಿರುವ ಮಾಜಿ ಸಿಎಂ ಕರುಣಾನಿಧಿ ನೇತೃತ್ವದ ಡಿಎಂಕೆ, ಸಾಮೂಹಿಕ ರಾಜೀನಾಮೆ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರದಿಂದ ರಾಜ್ಯದ ಸಚಿವ, ಶಾಸಕರ ಫೋನ್ ಕದ್ದಾಲಿಕೆ: ರಾಮಲಿಂಗಾರೆಡ್ಡಿ