Select Your Language

Notifications

webdunia
webdunia
webdunia
webdunia

ಡಿಎಂಕೆ ಮುಖ್ಯಸ್ಥ ಎಮ್.ಕರುಣಾನಿಧಿ ಡಿಸ್ಚಾರ್ಜ್

ಡಿಎಂಕೆ ಮುಖ್ಯಸ್ಥ ಎಮ್.ಕರುಣಾನಿಧಿ ಡಿಸ್ಚಾರ್ಜ್
ಚೆನ್ನೈ , ಗುರುವಾರ, 8 ಡಿಸೆಂಬರ್ 2016 (11:26 IST)
ನ್ಯೂಟ್ರಿಷನ್ ಮತ್ತು ಹೈಡ್ರೇಷನ್ ಸಪೋರ್ಟ್‌ಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಒಂದು ವಾರದ ಚಿಕಿತ್ಸೆ ಬಳಿಕ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 
 

 
ಔಷಧಿ ಸೇವನೆಯ ಅಡ್ಡಪರಿಣಾಮದಿಂದಾದ ಅಲರ್ಜಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ 93ರ ಹರೆಯದ ಕರುಣಾನಿಧಿ ಡಿಸೆಂಬರ್ 1 ರಂದು ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.
 
ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಎಂದು ಕಾವೇರಿ ಆಸ್ಪತ್ರೆ ಕಾರ್ಯಕಾರಿ ನಿರ್ದೇಶಕ ಡಾಕ್ಟರ್.ಎಸ್. ಅರವಿಂದನ್ ಹೇಳಿದ್ದಾರೆ.
 
ಅವರಿಗೆ ವಿಶ್ರಾಂತಿ ಸೂಚಿಸಲಾಗಿದ್ದು, ಮನೆಯಲ್ಲಿ ಅವರಿಗೆ ಅಗತ್ಯ ವೈದ್ಯಕೀಯ ಮತ್ತು ಶುಶ್ರೂಷೆ ಮುಂದುವರಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ. ಅನಾರೋಗ್ಯದಿಂದಾಗಿ ಕಳೆದ ಒಂದು ತಿಂಗಳಿನಿಂದ ಕರುಣಾನಿಧಿಯವರು ಸಾರ್ವಜನಿಕ ಚಟುವಟಿಕೆಗಳಿಂದ ದೂರವುಳಿದಿದ್ದರು.
 
ಅವರಿಗೆ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದ್ದು ಅಗತ್ಯ ವೈದ್ಯಕೀಯ ಚಿಕಿತ್ಸೆ ಮತ್ತು ಶುಶ್ರೂಷೆಯನ್ನು ಮನೆಯಲ್ಲೇ ಪಡೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. 
 
ಔಷಧಿ ಸೇವನೆಯ ಅಡ್ಡಪರಿಣಾಮದಿಂದಾದ ಅಲರ್ಜಿ ಬಳಿಕ ಕಳೆದೊಂದು ತಿಂಗಳಿಂದ ಕರುಣಾನಿಧಿ ಸಾರ್ವಜನಿಕ ಚಟುವಟಿಕೆಗಳಿಂದ ದೂರವುಳಿದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಮುರಿದ ಒಂದು ಸುಳ್ಳು