Select Your Language

Notifications

webdunia
webdunia
webdunia
webdunia

ಮದುವೆ ಮುರಿದ ಒಂದು ಸುಳ್ಳು

ಮದುವೆ ಮುರಿದ ಒಂದು ಸುಳ್ಳು
ಚಿಕ್ಕಬಳ್ಳಾಪುರ , ಗುರುವಾರ, 8 ಡಿಸೆಂಬರ್ 2016 (10:52 IST)
ಸಾವಿರ ಸುಳ್ಳು ಹೇಳಿ ಒಂದು ಮಾಡಿ ಮಾಡಿ ಅನ್ನುತ್ತಾರೆ. ಆದರೆ ವರ ಮಹಾಶಯನೊಬ್ಬ ಹೇಳಿದ ಒಂದು ಸುಳ್ಳು ಆತನ ಮದುವೆ ಮರಿದಿದ್ದಲ್ಲದೆ, ಕಂಬಿ ಎಣಿಸುವಂತೆ ಮಾಡಿದೆ. 
ಹೌದು ಚಿಕ್ಕಬಳ್ಳಾಪುರದ ನಿವಾಸಿ ಅಶ್ವತ್ಥನಾರಾಯಣ ಎಂಬಾತ ಇಂದು ನಗರದ ಶ್ರೀದೇವಿ ಕಲ್ಯಾಣಮಂಟಪದಲ್ಲಿ ಮದುವೆಯಾಗುವವನಿದ್ದ. ಕೇವಲ ಡಿಪ್ಲೊಮಾ ಪದವೀಧರನಾಗಿದ್ದ ಆತ ತಾನು ಕೆಎಎಸ್ ಅಧಿಕಾರಿ, ಬಿಇ, ಎಂಬಿಎ ಪದವಿ ಪಡೆದಿದ್ದೇನೆ ಎಂದು ಸುಳ್ಳು ಹೇಳಿ ಟೆಕ್ಕಿಯನ್ನು ಮದುವೆಯಾಗಲು ಹೊರಟಿದ್ದ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಸಚಿವರಾದ ಪರಮೇಶ್ವರ್, ರಮೇಶ್ ಕುಮಾರ್, ಸಂಸದ ಮುನಿಯಪ್ಪ ಸೇರಿದಂತೆ ಗಣ್ಯರೆಲ್ಲ ಶುಭಕೋರಿದ್ದಾರೆ ಎಂಬಂತೆ ಪ್ರಿಂಟ್ ಹಾಕಿಸಿದ್ದ.
 
ಆದರೆ ಮದುವೆಯ ಹಿಂದಿನ ರಾತ್ರಿ ಅಂದರೆ ಬುಧವಾರ ವಧುವಿನ ಕಡೆಯವರಿಗೆ ಆತನ ನಿಜಬಣ್ಣ ಬಯಲಾಗಿದೆ. ವರನಿಗೆ ಫೋನ್ ಕರೆ ಮಾಡಿದರೆ ಆತ ಸ್ವೀಕರಿಸಿಲ್ಲ. ಬಳಿಕ ಆತನನ್ನು ಮಂಟಪಕ್ಕೆ ಹೊತ್ತು ತಂದು ಸತ್ಯವನ್ನು ಬಾಯಿ ಬಿಡಿಸಿದ್ದಾರೆ.
 
ಮತ್ತೀಗ ಇದರಲ್ಲಿ ತನ್ನದೇನೂ ತಪ್ಪಿಲ್ಲ. ಬ್ರೋಕರ್ ಆಡಿದ ಆಟವಿದು ಎನ್ನುತ್ತಿದ್ದಾನೆ ನಕಲಿ ಕೆ.ಎ.ಎಸ್ ಅಧಿಕಾರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಡಬ್ಲ್ಯುನಿಂದ ಎಕ್ಸ್3, ಎಕ್ಸ್5 ಎಸ್‍ಯುವಿ