ನವದೆಹಲಿ : ಭಾರತೀಯರು ಮತ್ತು ಹಿಂದೂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಲ್ಡಿವ್ಸ್ ಸರ್ಕಾರ ಮಂತ್ರಿಗಳನ್ನು ವಜಾಗೊಳಿಸಿದ್ದು ಸುಳ್ಳು ಸುದ್ದಿ ಎಂಬ ಸಂಗತಿ ಈಗ ಹೊರಬಿದ್ದಿದೆ. ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿರುವ ಮಾಲ್ಡಿವ್ಸ್ ಸರ್ಕಾರ ನಾವು ಯಾವುದೇ ಮಂತ್ರಿಗಳನ್ನು ವಜಾ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ನೀಡಿದ್ದ ಭೇಟಿಯ ಬಳಿಕ ಆ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ಮಾಲ್ಡಿವ್ಸ್ ಸಚಿವರು, ಭಾರತ ಎಷ್ಟೇ ಹೊರಾಡಿದರೂ ಪ್ರವಾಸೋದ್ಯಮದಲ್ಲಿ ಮಾಲ್ಡಿವ್ಸ್ ಗೆ ಸ್ಪರ್ಧೆ ನೀಡಲು ಸಾಧ್ಯವಿಲ್ಲ. ಭಾರತದ ಕೆಟ್ಟ ವಾಸನೆ ಹಾಗೂ ಸ್ವಚ್ಛತೆಯಿಲ್ಲದ ಸ್ಥಳಗಳು ಪ್ರವಾಸಿಗರನ್ನು ದೂರವಿಡುತ್ತದೆ ಎಂದು ಟೀಕಿಸಿದ್ದರು.
ಈ ಬಗ್ಗೆ ಭಾರತದಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರಾದ ಮರಿಯಮ್ ಶಿಯಾನಾ, ಮಾಲ್ಷಾ ಮತ್ತು ಹಸ್ಸನ್ ಜಿಹಾನ್ ಅವರನ್ನು ವಜಾಗೊಳಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಈ ಸುದ್ದಿಗೆ ಸ್ಪಷ್ಟೀಕರಣ ನೀಡಿರುವ ಹಸ್ಸನ್ ಜಿಹಾನ್ ನಾವು ಯಾರು ವಜಾಗೊಂಡಿಲ್ಲ. ಈ ಸುದ್ದಿ ಸುಳ್ಳು ಎಂದಿದ್ದಾರೆ.