ಇಸ್ಲಾಮಾಬಾದ್ : ಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವನ್ನಪ್ಪಿ, 12 ಮಂದಿ ಗಾಯಗೊಂಡಿರುವ ಘಟನೆ ಕರಾಚಿಯಲ್ಲಿ ನಡೆದಿದೆ.
ಕರಾಚಿ ನಗರದ ಒಳಚರಂಡಿಯಲ್ಲಿ ಅನಿಲ ಸ್ಫೋಟ ಸಂಭವಿಸಿದ ಕಾರಣ, ಕನಿಷ್ಠ 14 ಮಂದಿ ಸಾವಿಗೀಡಾಗಿದ್ದಾರೆ. ಇತರ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಾಚಿಯ ಶೇರ್ಶಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಒಳಚರಂಡಿ ಮೇಲೆ ಬ್ಯಾಂಕೊಂದರ ಕಟ್ಟಡ ನಿರ್ಮಿಸಲಾಗಿದೆ. ಒಳಚರಂಡಿಯಲ್ಲಿ ಶೇಖರಣೆಯಾಗಿದ್ದ ಅನಿಲಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ.