2022ರ ಜುಲೈ ಕೊನೆಯ ವಾರದಲ್ಲಿ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಬೆಲೆ 38.55 ರೂ ಇತ್ತು. ಕೇವಲ 1 ವರ್ಷದೊಳಗಾಗಿ ಅದರ ಬೆಲೆ 200 ರೂ ಗಡಿದಾಟಿದೆ. ನಿನ್ನೆ ಜೂನ್ 29ರಂದು 197 ರೂ ಇದ್ದ ಅದರ ಬೆಲೆ ಇಂದು 204.20 ರೂ ಆಗಿದೆ.
ಅಂದರೆ, ಅದರ ಬೆಲೆ ಒಂದು ವರ್ಷದಲ್ಲಿ ಶೇ. 429ರಷ್ಟು ಹೆಚ್ಚಾಗಿದೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಮುಖ್ಯಕಚೇರಿ ಹೊಂದಿರುವ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆ ಪಾಲಿಮರ್ ಕೆಮಿಕಲ್ ಉತ್ಪನ್ನಗಳನ್ನು ತಯಾರಿಸುತ್ತದೆ. ಪಿಇ, ಪಿವಿಸಿ, ಫಿಲ್ಲರ್ ಕೌಂಪೌಂಡ್, ಮಾಸ್ಟರ್ ಬ್ಯಾಚಸ್, ಫೂಟ್ವೇರ್ ಕಾಂಪೌಂಡ್, ಪೈಪ್ ಕಾಂಪೌಂಡ್, ಪೆರಾಕ್ಸೈಡ್ ಕಾಂಪೌಂಡ್ ಇತ್ಯಾದಿ ಉತ್ಪನ್ನಗಳನ್ನು ಇದು ತಯಾರಿಸುತ್ತದೆ.
ಇದರ ಆದಾಯ 2022-23ರ ವರ್ಷದಲ್ಲಿ 667 ಕೋಟಿ ರೂ ಇದೆ. ನಿವ್ವಳ ಆದಾಯ 48 ಕೋಟಿ ರೂಗೂ ಹೆಚ್ಚಿದೆ. ಇದರ ಒಟ್ಟು ಷೇರುಸಂಪತ್ತು 1928 ಕೋಟಿ ರೂನಷ್ಟಿದೆ.