Publish Date: Sat, 01 Jul 2023 (11:58 IST)
Updated Date: Sat, 01 Jul 2023 (12:16 IST)
ಕೋಲ್ಕತಾ ಮೂಲದ ಪಾಲಿಮರ್ ಉತ್ಪನ್ನಗಳ ತಯಾರಕ ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆ ಇದೀಗ ಅಪ್ಪಟ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿದೆ. ಕಳೆದ 1 ವರ್ಷದಲ್ಲಿ ಇದರ ಷೇರುಬೆಲೆ ಶೇ. 387ರಷ್ಟು ಬೆಳೆದಿದೆ. 2022-23ರ ಹಣಕಾಸು ವರ್ಷದಲ್ಲಿ ಇದರ ವ್ಯಾವಹಾರಿಕ ಲಾಭದಲ್ಲೂ ಗಮನಾರ್ಹ ಏರಿಕೆ ಆಗಿದೆ.
ಇದರ ಷೇರುದಾರರಿಗೆ ಡಬಲ್ ಧಮಾಕ ಸಿಕ್ಕಿದೆ. ಡಿದೇವ್ ಪ್ಲಾಸ್ಟಿಕ್ಸ್ನ ಷೇರುಬೆಲೆ ಒಂದು ವರ್ಷದಲ್ಲಿ ಶೇ. 429ರಷ್ಟು ಬೆಳೆದಿರುವ ಜೊತೆಗೆ ಕಂಪನಿಯು ಷೇರುದಾರರಿಗೆ ಬೋನಸ್ ಷೇರುಗಳನ್ನು ಪ್ರಕಟಿಸಿದೆ.
ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ನ ನಿರ್ದೇಶಕರ ಮಂಡಳಿ ತನ್ನ ಕಂಪನಿಯ ಷೇರುದಾರರಿಗೆ 1:10 ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸಲು ಅನುಮೋದನೆ ನೀಡಿರುವುದಾಗಿ ಜೂನ್ 19ರಂದು ತಿಳಿಸಲಾಗಿದೆ. ಅಂದರೆ ಪ್ರತೀ 10 ಷೇರಿಗೆ 1 ಹೆಚ್ಚುವರಿ ಷೇರು ಸಿಗುತ್ತದೆ. ಜುಲೈ 16ರಂದು ನಡೆಯುವ ಮಂಡಳಿ ಸಭೆ ಆಗಿ 2 ತಿಂಗಳೊಳಗೆ ಬೋನಸ್ ಷೇರುಗಳು ಜಮೆ ಆಗುತ್ತವೆ.
ಡಿದೇವ್ ಪ್ಲಾಸ್ಟಿಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಬೋನ್ ಷೇರುಗಳ ವಿಶೇಷತೆ ಎಂದರೆ ಇದರ ಷೇರು ಮೌಲ್ಯದಲ್ಲಿ ಯಾವುದೇ ವ್ಯತ್ಯಯ ಮಾಡದೆಯೇ ಹೆಚ್ಚುವರಿ ಷೇರು ವಿತರಿಸಲಾಗುತ್ತದೆ. ಹಾಗೆ ಮಾಡುವ ಕೆಲವೇ ಕಂಪನಿಗಳಲ್ಲಿ ಡಿದೇವ್ ಒಂದು. ಈ ಬೋನಸ್ ಷೇರುಗಳ ವಿತರಣೆಯಿಂದ ಕಂಪನಿಯ ಷೇರುಗಳ ಸಂಖ್ಯೆ ಹೆಚ್ಚುತ್ತದೆ. ಷೇರುಗಳ ಹರಿವು ಹೆಚ್ಚಾಗುತ್ತದೆ.