Publish Date: Wed, 24 Aug 2022 (12:20 IST)
Updated Date: Wed, 24 Aug 2022 (10:54 IST)
ಲಕ್ನೋ : ಓದಿನಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತ ಬಾಲಕನೊಬ್ಬನು ತನ್ನ ಸ್ನೇಹಿತನನ್ನೇ ಕತ್ತು ಸೀಳಿ ಕೊಂದ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ.
ಗಾಜಿಯಾಬಾದ್ನ ಆಕಾಶ್ ನಗರ ಪ್ರದೇಶದ ನಿವಾಸಿ ನೀರಜ್ (13)ನನ್ನು 16 ವರ್ಷದ ಬಾಲಕ ಕೊಂದಿದ್ದಾನೆ. ನೀರಜ್ನೊಂದಿಗೆ ಅಪ್ರಾಪ್ತ ಬಾಲಕ ಕೆಲ ತಿಂಗಳಿಂದ ಸ್ನೇಹ ಬೆಳಸಿದ್ದ.
ಈ ವೇಳೆ ನಿರಜ್ ದುರ್ಬಲನಾಗಿರುವುದನ್ನು ಗಮನಿಸಿ ಕಳೆದ 5 ತಿಂಗಳಿನಿಂದ ನೀರಜ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿ ನೀರಜ್ನನ್ನು ಕಾರು ನೋಡುವ ನೆಪದಲ್ಲಿ ಕರೆದೊಯ್ದಿದ್ದಾನೆ. ಅಲ್ಲಿ ಬಿದ್ದಿದ್ದ ಬಿಯರ್ ಬಾಟಲ್ನ್ನು ಎತ್ತುಕೊಂಡು ನೀರಜ್ನ ಕತ್ತು ಸೀಳಿದ್ದಾನೆ. ಬಳಿಕ ನೀರಜ್ ಶವವನ್ನು ಪೊದೆಯಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ನೀರಜ್ ತಂದೆ ಪೊಲೀಸರಿಗೆ ದೂರು ನೀಡಿದ್ದು, ಅಪ್ರಾಪ್ತ ಬಾಲಕ ತಮ್ಮ ಮನೆಗೆ ಬಂದು ನೀರಜ್ನನ್ನು ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದಾರೆ. ಅವರ ಹೇಳಿಕೆಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, 16 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.