Daily Horoscope

Select Your Language

Notifications

webdunia
webdunia
webdunia
webdunia

Video: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಿಜೆಪಿ ಭರ್ಜರಿ ವಿಜಯೋತ್ಸವ: ಅಭಿಜಿತ್ ದಿಪ್ಕೆ ಸಂಭ್ರಮಾಚರಣೆ ಹೇಗಿತ್ತು

Dharmendra Pradhan
ನೀಟ್ ಪರೀಕ್ಷಾ ಅಕ್ರಮ ಹಾಗೂ ಪೇಪರ್ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸತತ ಒಂದು ತಿಂಗಳಿನಿಂದ ನಿರಂತರ ಹೋರಾಟ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಕ್ಷ ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳಿಗೆ ಕೊನೆಗೂ ದೊಡ್ಡ ಯಶಸ್ಸು ಸಿಕ್ಕಿದೆ. ವಿದ್ಯಾರ್ಥಿಗಳ ತೀವ್ರ ಆಕ್ರೋಶ ಹಾಗೂ ಸಿಜೆಪಿ ಹೋರಾಟಕ್ಕೆ ಮಣಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
 
ಈ ಬೆಳವಣಿಗೆಯನ್ನು "ಪ್ರಜಾಪ್ರಭುತ್ವ ಮತ್ತು ದೇಶದ ವಿದ್ಯಾರ್ಥಿ ಶಕ್ತಿಗೆ ಸಿಕ್ಕ ದೊಡ್ಡ ಜಯ" ಎಂದು ಬಣ್ಣಿಸಿರುವ ಸಿಜೆಪಿ ನಾಯಕರು, ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ವಿಜಯೋತ್ಸವ ಆಚರಿಸಿದ್ದಾರೆ.
 
ಕೇಂದ್ರ ಶಿಕ್ಷಣ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಪತ್ರ ರವಾನಿಸುತ್ತಿದ್ದಂತೆ, ಜಂತರ್ ಮಂತರ್‌ನಲ್ಲಿ ಧರಣಿ ನಿರತರಾಗಿದ್ದ ನೂರಾರು ವಿದ್ಯಾರ್ಥಿಗಳು ಹಾಗೂ ಸಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಇದು ಯಾವುದೇ ರಾಜಕೀಯ ಪಕ್ಷದ ಗೆಲುವಲ್ಲ, ಹಗಲಿರುಳು ಕಷ್ಟಪಟ್ಟು ಓದಿ ವಂಚನೆಗೆ ಒಳಗಾಗಿದ್ದ ಲಕ್ಷಾಂತರ ಅಮಾಯಕ ವಿದ್ಯಾರ್ಥಿಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ" ಎಂದು ಸಿಜೆಪಿ ವಕ್ತಾರರು ಹರ್ಷ ವ್ಯಕ್ತಪಡಿಸಿದ್ದಾರೆ.

 

ಸಿಜೆಪಿ ಇಟ್ಟಿದ್ದ ಮೂರು ಮುಖ್ಯ ಬೇಡಿಕೆಗಳು ಸಂಪೂರ್ಣ ಈಡೇರಿಕೆ

 
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಕ್ಕೆ ₹1 ಕೋಟಿ ಪರಿಹಾರ ಧನ.
 
ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಕರ ಮೇಲಿನ ಪ್ರಕರಣಗಳ ರದ್ದು.
 
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ.
pic.twitter.com/sFSQJiMN9c

 

— Mukesh Mathur (@mukesh1275) July 25, 2026

Share this Story:

Follow Webdunia kannada

ಮುಂದಿನ ಸುದ್ದಿ

ಕಾಕ್ರೋಚ್‌ಗಳ ಬೇಡಿಕೆಗೆ ಜಗ್ಗಿದ ಕೇಂದ್ರ ಸರ್ಕಾರ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ