Daily Horoscope

Select Your Language

Notifications

webdunia
webdunia
webdunia
webdunia

Video: ಎಎಪಿ ಆಡಳಿತವಿರುವ ಪಂಜಾಬ್ ನಲ್ಲೂ ಪೇಪರ್ ಲೀಕ್ ಆಗಿದೆ, ಏನಂತೀರಿ ಎಂದಿದ್ದಕ್ಕೆ ಅಭಿಜಿತ್ ದಿಪ್ಕೆ ಪ್ರತಿಕ್ರಿಯೆ ನೋಡಿ ಟ್ರೋಲ್

CJP leaders
Photo Credit: X
ನವದೆಹಲಿ: ನೀಟ್ ಸೇರಿದಂತೆ ದೇಶದ ವಿವಿಧ ಪರೀಕ್ಷಾ ಅಕ್ರಮ ಹಾಗೂ ಪೇಪರ್ ಸೋರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ರಾಜಕೀಯ ವಿಶ್ಲೇಷಕ ಮತ್ತು ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್ ಅಭಿಜೀತ್ ದೀಪ್ಕೆ ಅವರಿಗೆ ಮಾಧ್ಯಮದವರು ಕೇಳಿದ ಒಂದು ನೇರ ಪ್ರಶ್ನೆ ಕ್ಷಣಕಾಲ ತಡವರಿಸಿದ ಘಟನೆ ನಡೆದಿದೆ.

ಪ್ರಶ್ನೋತ್ತರ ಹಾಗೂ ಚರ್ಚೆಯ ವೇಳೆ ಪತ್ರಕರ್ತರೊಬ್ಬರು ಎಸೆದ ಪ್ರಶ್ನೆಗೆ ಏನು ಉತ್ತರಿಸಬೇಕೆಂದು ತಿಳಿಯದೇ ಅಭಿಜೀತ್ ದೀಪ್ಕೆ ಕೆಲ ಕ್ಷಣ ತಬ್ಬಿಬ್ಬಾದರು.

ಪರೀಕ್ಷಾ ಅಕ್ರಮಗಳು ಮತ್ತು ಪೇಪರ್ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಮತ್ತು ಸರ್ಕಾರದ ಪ್ರಮುಖರ ರಾಜೀನಾಮೆಗೆ ಅಭಿಜೀತ್ ದೀಪ್ಕೆ ಗಟ್ಟಿಯಾಗಿ ಆಗ್ರಹಿಸುತ್ತಿದ್ದರು.

ಈ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು, "ನೀವು ಪರೀಕ್ಷಾ ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿರುವುದು ಒಳ್ಳೆಯದೇ. ಆದರೆ, ಆಮ್ ಆದ್ಮಿ ಪಾರ್ಟಿ ಆಡಳಿತವಿರುವ ಪಂಜಾಬ್‌ನಲ್ಲೂ ಇತ್ತೀಚೆಗೆ ಪೇಪರ್ ಸೋರಿಕೆ ಪ್ರಕರಣ ವರದಿಯಾಗಿದೆಯಲ್ಲಾ? ಹಾಗಿದ್ದ ಮೇಲೆ ನೀವು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆಯನ್ನು ಆಗ್ರಹಿಸುತ್ತೀರಾ?" ಎಂದು ನೇರವಾಗಿ ಪ್ರಶ್ನಿಸಿದರು.

ಈ ನಿರೀಕ್ಷಿತವಲ್ಲದ ಪ್ರಶ್ನೆ ಎದುರಾಗುತ್ತಿದ್ದಂತೆಯೇ, ರೊಚ್ಚಿಗೆದ್ದು ಮಾತನಾಡುತ್ತಿದ್ದ ಅಭಿಜೀತ್ ದೀಪ್ಕೆ ಸುಮ್ಮನಿರುವಂತೆ ಸನ್ನೆ ಮಾಡಿ ಬಳಿಕ ಎಲ್ಲಾ ಕಡೆ ಪ್ರಶ್ನೆ ಮಾಡುತ್ತೇವೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಈ ಸನ್ನಿವೇಶದ ವೀಡಿಯೋ ತುಣುಕು ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಾಗೂ ವಿಪಕ್ಷಗಳ ಬೆಂಬಲಿಗರು ಅಭಿಜೀತ್ ದೀಪ್ಕೆ ಅವರನ್ನು ವ್ಯಾಪಕವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಪರೀಕ್ಷಾ ಅಕ್ರಮ ಅಥವಾ ಭ್ರಷ್ಟಾಚಾರದ ವಿರುದ್ಧದ ಹೋರಾಟವು ಪಕ್ಷಪಾತವಿಲ್ಲದೆ ಇರಬೇಕು. ಒಂದು ಪಕ್ಷದ ಸರ್ಕಾರವಿದ್ದಾಗ ರಾಜೀನಾಮೆ ಕೇಳುವವರು, ತಮ್ಮ ನೆಚ್ಚಿನ ಪಕ್ಷ ಅಥವಾ ಮೈತ್ರಿಕೂಟದ ರಾಜ್ಯಗಳಲ್ಲಿ ಅಕ್ರಮ ನಡೆದಾಗ ಮೌನ ವಹಿಸುವುದು ಡಬಲ್ ಸ್ಟ್ಯಾಂಡರ್ಡ್ ಎಂದು ನೆಟ್ಟಿಗರು ಟೀಕಿಸಿದ್ದಾರೆ.

pic.twitter.com/D9nZb6amu0

 

— Spider Update (@SpiderAlert24) July 24, 2026

Share this Story:

Follow Webdunia kannada

ಮುಂದಿನ ಸುದ್ದಿ

ಸರಿಯಾಗೇ ಆಯ್ತು.. ಅಪ್ಪನ ಔಷಧಿ ದುಡ್ಡಲ್ಲಿ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಟ್ಟ ಯುವಕ: ಆದ್ರೆ ಆಕೆ ಮಾಡಿದ್ದೇನು Video