Select Your Language

Notifications

webdunia
webdunia
webdunia
webdunia

ಮಹಿಳೆಯರು ಅಂತ ಸೀಟು ಬಿಟ್ಟುಕೊಡ್ಬೇಕಾ... ಮೆಟ್ರೋ ರೈಲಿನಲ್ಲಿ ನಡೆದ ಈ ಘಟನೆ ವಿಡಿಯೋ ತಪ್ಪದೇ ನೋಡಿ Video

Janakpuri Metro incident
Photo Credit: X
ದೆಹಲಿಯ ಜನಕ್‌ಪುರಿ ವೆಸ್ಟ್ ಮೆಟ್ರೋ ರೈಲಿನಲ್ಲಿ ನಡೆದ ಸಣ್ಣ ಘಟನೆಯೊಂದು ಇಂದು ಇಡೀ ಸಮಾಜವು ಗಂಭೀರವಾಗಿ ಆಲೋಚಿಸುವಂತೆ ಮಾಡಿದೆ. ಮೆಟ್ರೋ ರೈಲಿನಲ್ಲಿ ಪುರುಷ ಪ್ರಯಾಣಿಕನೊಬ್ಬ ತನ್ನ ಸಾಮಾನ್ಯ ಸೀಟಿನಲ್ಲಿ ಕುಳಿತಿದ್ದಾಗ, ಆತನಿಂದ ಸೀಟು ಪಡೆಯಲು ಸಾಧ್ಯವಾಗದ ಮಹಿಳೆಯೊಬ್ಬಳು ಎಲ್ಲರ ಎದುರಲ್ಲೇ ಆತನನ್ನು ಹೀನಾಯವಾಗಿ ನಿಂದಿಸಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯು ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಮಾನಸಿಕ ಒತ್ತಡ, ಅವರ ಆತ್ಮಗೌರವ ಹಾಗೂ ಬದಲಾಗಬೇಕಾದ ಜನರ ಮಾನಸಿಕತೆಯನ್ನು ಎತ್ತಿ ತೋರಿಸುತ್ತಿದೆ.

ಜನಕ್‌ಪುರಿ ವೆಸ್ಟ್ ಮೆಟ್ರೋದಲ್ಲಿ ನಡೆದಿದ್ದೇನು?
ಮೆಟ್ರೋದಲ್ಲಿ ಖಾಲಿ ಇದ್ದ ಸಾಮಾನ್ಯ ಸೀಟಿನಲ್ಲಿ ವ್ಯಕ್ತಿಯೊಬ್ಬರು ಕುಳಿತಿದ್ದರು. ಆ ಸೀಟು ಮಹಿಳೆಯರಿಗಾಗಿ ಮೀಸಲಾದ ಸೀಟಾಗಿರಲಿಲ್ಲ. ಆದರೂ, ಮಹಿಳೆಯೊಬ್ಬರು ಬಂದು ತನಗೆ ಕುಳಿತುಕೊಳ್ಳಲು ಜಾಗ ಬಿಟ್ಟುಕೊಡುವಂತೆ ಆಗ್ರಹಿಸಿದ್ದಾರೆ.

ಆ ವ್ಯಕ್ತಿ ತಮಗೆ ಸೀಟು ಬಿಟ್ಟುಕೊಡಲು ನಿರಾಕರಿಸಿದ್ದೇ ತಡ, ಆ ಮಹಿಳೆ ಎಲ್ಲರ ಎದುರಲ್ಲೇ ಆತನ ಮೇಲೆ ರೇಗಿಬಿದ್ದು, ಹಗುರವಾದ ಮಾತುಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. ತಾನು ಯಾವುದೇ ನಿಯಮ ಉಲ್ಲಂಘಿಸಿಲ್ಲದಿದ್ದರೂ ಮತ್ತು ಮಹಿಳೆಯರ ಸೀಟಿನಲ್ಲಿ ಕುಳಿತುಕೊಳ್ಳದಿದ್ದರೂ, ಸಾರ್ವಜನಿಕವಾಗಿ ಆ ವ್ಯಕ್ತಿ ಅನುಭವಿಸಿದ ಮಾನಸಿಕ ಮುಜುಗರ ಮತ್ತು ಅಪಮಾನ ಸಣ್ಣದಾಗಿರಲಿಲ್ಲ.

ಕೇವಲ ಪುರುಷ ಎಂಬ ಒಂದೇ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಂದು ವಿಷಯದಲ್ಲೂ ಬಿಟ್ಟುಕೊಡಬೇಕು ಅಥವಾ ನಿಂದನೆಗಳನ್ನು ಸಹಿಸಿಕೊಡಬೇಕು ಎಂಬುದು ಎಷ್ಟರ ಮಟ್ಟಿಗೆ ನ್ಯಾಯ? ಯಾವುದೇ ಜಗಳ ಅಥವಾ ವಾದ-ವಿವಾದ ನಡೆದಾಗ ಸಮಾಜವು ತಕ್ಷಣವೇ ಪುರುಷನನ್ನೇ ತಪ್ಪಿತಸ್ಥನನ್ನಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಂಡಿದೆ. ಆದರೆ, ಪ್ರತಿಯೊಂದು ಸನ್ನಿವೇಶದಲ್ಲೂ ಮಹಿಳೆಯರೇ ಸರಿ ಅಥವಾ ಪುರುಷರೇ ತಪ್ಪು ಎಂದು ತೀರ್ಮಾನಿಸುವುದು ತಪ್ಪು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

pic.twitter.com/8mIY9eD87z

 

— ???? NiTu ???? (@NituTiw81600052) July 24, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ಯಾವ ಜಿಲ್ಲೆಗೆ ಭಾರೀ ಮಳೆ, ಯಾವ ಜಿಲ್ಲೆಗೆ ಸಾಧಾರಣ ಮಳೆ ಇಲ್ಲಿದೆ ವಿವರ