Select Your Language

Notifications

webdunia
webdunia
webdunia
webdunia

ಯಮುನೇತ್ರಿಗೆ ಬರುವ ಭಕ್ತರೇ ಎಚ್ಚರ: ಯಾತ್ರೆಯನ್ನು ಮುಂದೂಡುವಂತೆ ಪೊಲೀಸ್ ಮನವಿ

Yamunetri

Sampriya

ಉತ್ತರಕಾಶಿ , ಭಾನುವಾರ, 12 ಮೇ 2024 (13:23 IST)
ಉತ್ತರಕಾಶಿ:  ಚಾರ್ ಧಾಮ್‌ ಯಾತ್ರೆ ಪ್ರಾರಂಭವಾಗುತ್ತಿದ್ದಂತೆ ಹಾಗೇ ಸಾಕಷ್ಟು ಭಕ್ತರು ಯಮುನೋತ್ರಿಯನ್ನು ತಲುಪಿದ್ದು, ಇದೀಗ ಹೆಚ್ಚಿನ ಭಕ್ತರನ್ನು ಕಳುಹಿಸುವುದು ಅಪಾಯಕಾರಿ ಎಂದು ಉತ್ತರಕಾಶಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಅದರಂತೆ ಭಕ್ತರು ತಮ್ಮ ಯಾತ್ರೆಯನ್ನು ಮೇ 12 ಕ್ಕೆ ಮುಂದೂಡುವಂತೆ ವಿನಂತಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ, "ಈಗಾಗಲೇ ಯಮುನೋತ್ರಿ ಧಾಮಕ್ಕೆ ಸಾಮರ್ಥ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದು ಅಪಾಯಕಾರಿ ಎಂದು ಬರೆದುಕೊಂಡಿದ್ದಾರೆ.


"ಇಂದು ಯಮುನೋತ್ರಿಗೆ ಹೋಗುವ ಎಲ್ಲಾ ಭಕ್ತರು ತಮ್ಮ ಯಮುನೋತ್ರಿ ಯಾತ್ರೆಯನ್ನು ಇಂದಿನಿಂದ ಮುಂದೂಡುವಂತೆ ವಿನಂತಿಸಲಾಗಿದೆ" ಎಂದು ಪೊಲೀಸರು ಮತ್ತಷ್ಟು ಸೇರಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಉತ್ತರಕಾಶಿ ಪೊಲೀಸರು ಯಮುನೋತ್ರಿ ಧಾಮ್ ಮಾರ್ಗದ ಸಂಚಾರ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್‌ ಪೆನ್‌ಡ್ರೈವ್ ಪ್ರಕರಣ: ಪ್ರೀತಂ ಗೌಡ ಆಪ್ತರನ್ನು ವಶಕ್ಕೆ ಪಡೆದ ಎಸ್‌ಐಟಿ