Select Your Language

Notifications

webdunia
webdunia
webdunia
webdunia

ನೋಟು ನಿಷೇಧ ಮಾನವ ನಿರ್ಮಿತ ದುರಂತ: ಮಮತಾ ಬ್ಯಾನರ್ಜಿ

ನೋಟು ನಿಷೇಧ ಮಾನವ ನಿರ್ಮಿತ ದುರಂತ: ಮಮತಾ ಬ್ಯಾನರ್ಜಿ
ಕೋಲ್ಕತ್ತಾ , ಶುಕ್ರವಾರ, 9 ಡಿಸೆಂಬರ್ 2016 (19:27 IST)
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿಯನ್ನು ಮುಂದುವರೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ದೇಶಕ್ಕೆ ಆರ್ಥಿಕ ವಿಪತ್ತನ್ನು ಸೃಷ್ಟಿಸಿದ್ದಾರೆ, ಪ್ರಧಾನಿಯಾಗಿ ಮುಂದುವರೆಯಲು ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಗುಡುಗಿದ್ದಾರೆ.
 
ನೋಟು ನಿಷೇಧದಿಂದಾಗಿ ದೇಶದ ಬೆಳವಣಿಗೆ ಮತ್ತು ಉದ್ಯಮಕ್ಕೆ ಭಾರಿ ಪೆಟ್ಟು ನೀಡಿದಂತಾಗಿದೆ. ಪ್ರಧಾನಿ ಯಾರನ್ನು ಕೂಡ ನಂಬುವುದಿಲ್ಲ ಮತ್ತು ದೇಶಕ್ಕೆ ಯಾವುದು ಹಿತವೆಂಬುದನ್ನು ಅರಿತುಕೊಳ್ಳುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ. 
 
ರಾಜ್ಯ ಸಚಿವಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, "ಇದರಲ್ಲಿ ಒಂದು ತಂಡವಾಗಿ ಕೆಲಸ ನಿರ್ವಹಿಸಿರುವುದು ಕಂಡು ಬರುವುದಿಲ್ಲ. ಇದು ಏಕವ್ಯಕ್ತಿ ಸರ್ವಾಧಿಕಾರತ್ವ. ಸೃಷ್ಟಿಯಾಗಿರುವುದು ಮಾನವ ನಿರ್ಮಿತ ವಿಪತ್ತು. ಮತ್ತಿದು ಅಪಾಯಕಾರಿ ಪ್ರವೃತ್ತಿ ಎಂದು ಕಿಡಿಕಾರಿದರು. 
 
ತಪ್ಪು ಮಾಡಿದ ಬಳಿಕ ಅವರು ಎದೆ ಮತ್ತು ಭುಜವನ್ನು ತೋರಿಸುತ್ತಾರೆ. ಏನಿದು? ಇಂತವರು ಸಿನಿಮಾಗಳಲ್ಲಿ ಇರಬೇಕಷ್ಟೇ. ರಾವಣನಿಗೂ ದೊಡ್ಡದಾದ ಭುಜಗಳಿದ್ದವು ಎಂದು ಅವರು ಕುಹಕವಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ನೋಟ್ ಬ್ಯಾನ್ ಪ್ರತಿಭಟನೆ: ವಿಪಕ್ಷಗಳ ವಿರುದ್ಧ ವೆಂಕಯ್ಯನಾಯ್ಡು ಗರಂ