Select Your Language

Notifications

webdunia
webdunia
webdunia
webdunia

ನೋಟ್ ಬ್ಯಾನ್ ಪ್ರತಿಭಟನೆ: ವಿಪಕ್ಷಗಳ ವಿರುದ್ಧ ವೆಂಕಯ್ಯನಾಯ್ಡು ಗರಂ

ನೋಟ್ ಬ್ಯಾನ್ ಪ್ರತಿಭಟನೆ: ವಿಪಕ್ಷಗಳ ವಿರುದ್ಧ ವೆಂಕಯ್ಯನಾಯ್ಡು ಗರಂ
ಬೆಂಗಳೂರು , ಶುಕ್ರವಾರ, 9 ಡಿಸೆಂಬರ್ 2016 (18:12 IST)
ನೋಟ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಸದನ ನಡೆಸಲು ಬಿಡದೆ ಸಂಸತ್‌ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿವೆ. ಅವರೇಕೆ ಪ್ರತಿಭಟನೆ ಮಾಡುತ್ತಿದ್ದಾರೆ ಅಂತ ನಮಗೂ ಗೊತ್ತಿಲ್ಲ. ಆದರೆ, ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿ ಗಾಂಧಿ ತತ್ವಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ವಾಗ್ದಾಳಿ ನಡೆಸಿದರು. 
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪ್ಪು ಹಣ ತಡೆಗಟ್ಟಲು ಕೇಂದ್ರ ಸರಕಾರ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸುತ್ತಿವೆ. ಕಪ್ಪು ಹಣ ಮಟ್ಟ ಹಾಕಬಾರದು ಎನ್ನುವುದು ಅವರ ನಿಲುವು ಎಂದು ಆರೋಪಿಸಿದರು. 
 
ಕಪ್ಪು ಹಣದ ವಿರುದ್ಧ ಪ್ರಧಾನಿ ಮೋದಿ ಅವರು ಸಮರ ಸಾರಿದ್ದಾರೆ. ಸಮಾಜದಲ್ಲಿ ಕೆಲವೊಂದು ಬದಲಾವಣೆ ಆಗಬೇಕಾದರೆ ಕೆಲವೊಂದು ಸಮಸ್ಯೆಗಳು ಆಗುತ್ತದೆ ಎಂದು ನೋಟ್ ಬ್ಯಾನ್ ವಿಚಾರವನ್ನು ಸಮರ್ಥಿಸಿಕೊಂಡರು. 
 
ರಾಜ್ಯದಲ್ಲಿ ಸರಕಾರಿ ಅಧಿಕಾರಿಗಳ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ಕೋಟಿ ಕೋಟಿ ಹೊಸ ನೋಟುಗಳು ಸಿಕ್ಕಿದೆ. ಈ ಪ್ರಕರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಸೆಕ್ಸ್ ಒಲ್ಲೆ ಎಂದಳೆಂದು ಮರ್ಮಾಂಗವನ್ನೇ ಕತ್ತರಿಸಿಕೊಂಡ