ದೈಹಿಕ ಸಂಪರ್ಕ ನಡೆಸಲು ಪತ್ನಿ ಸಹಕರಿಸುತ್ತಿಲ್ಲವೆಂಬ ಹತಾಶೆಯಲ್ಲಿ 37 ವರ್ಷದ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ವಾರದ ಆರಂಭದಲ್ಲಿ ಈ ಘಟನೆ ನಡೆದಿದ್ದು ಘಾನ್ಸಿ ರಾಮ್ ಎಂಬಾತ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡವನಾಗಿದ್ದಾನೆ. ಕುಡಿದ ಅಮಲಿನಲ್ಲಿ ಮನೆಗೆ ಬಂದ ಆತ ಪತ್ನಿಯೊಂದಿಗೆ ಸಂಭೋಗಕ್ಕಾಗಿ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸಿದ್ದು ಕೋಪದ ಭರದಲ್ಲಿ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ.
ಕಳೆದ ಒಂದು ದಶಕದಿಂದ ಪತ್ನಿ ತನ್ನನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ರಾಮ್ ಆರೋಪಿಸಿದ್ದಾನೆ. ದಂಪತಿಗಳ ವಿವಾಹವಾಗಿ 18 ವರ್ಷಗಳಾಗಿದ್ದು ಮೂವರು ಮಕ್ಕಳಿದ್ದಾರೆ.
ನನ್ನ ಪತ್ನಿ ಕಳೆದ 10 ರಿಂದ 12 ವರ್ಷಗಳಿಂದ ನನ್ನನ್ನು ದೂರ ತಳ್ಳುತ್ತಿದ್ದಾಳೆ. ಆಕೆ ನನ್ನೆಡೆಗೆ ಪ್ರೀತಿಯನ್ನೇ ತೋರುತ್ತಿಲ್ಲ ಎಂದು ರಾಮ್ ಆರೋಪಿಸಿದ್ದಾನೆ. ಆದರೆ ತನ್ನ ಪತಿ ಮಾಡುತ್ತಿರುವ ಆರೋಪವನ್ನು ತಳ್ಳಿ ಹಾಕಿರುವ ಪತ್ನಿ ಮಂಜ್ರಿ, ಆತ ಕುಡಿದಿದ್ದನೆಂದು ಕೋಪಗೊಂಡು ಸಂಭೋಗಕ್ಕೆ ಒಲ್ಲೆ ಎಂದೆ. ಆದರೆ ನನ್ನದೇನೂ ತಪ್ಪಿಲ್ಲದಿದ್ದರೂ ಆತ ಸುಳ್ಳು ಆರೋಪ ಹೊರಿಸುತ್ತಿದ್ದಾನೆ ಎನ್ನುತ್ತಾಳೆ.