ಮುಂಬೈ: ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಆಕೆಯ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಬಂದಿದೆ. ಕೊನೆಗೂ ಅವರ ಕೊನೆಯ ಆಸೆ ಈಡೇರಲೇ ಇಲ್ಲ.
ದೆಹಲಿಯಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಶ್ರದ್ಧಾ ವಾಕರ್ ನನ್ನು ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲ ಎಂಬಾತ ಬರ್ಬರವಾಗಿ ಹತ್ಯೆ ಮಾಡಿ ಮೃತದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿಟ್ಟಿದ್ದ. ಬಳಿಕ ಒಂದೊಂದೇ ತುಂಡುಗಳನ್ನು ಪ್ರತಿನಿತ್ಯ ನಿರ್ಜನ ಪ್ರದೇಶದಲ್ಲಿ ಎಸೆದು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ.
ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದುವರೆಗೆ ಶ್ರದ್ಧಾಳ ದೇಹದ ಎಲ್ಲಾ ಭಾಗಗಳೂ ಕುಟುಂಬಸ್ಥರಿಗೆ ಸಿಕ್ಕಿರಲಿಲ್ಲ. ಮಗಳ ಮೃತದೇಹದ ಎಲ್ಲಾ ಭಾಗ ಸಿಕ್ಕ ಬಳಿಕ ಅಂತ್ಯ ಕ್ರಿಯೆ ನಡೆಸಲು ತಂದೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಆದರೆ ಇದೀಗ ಅವರೇ ಇಹಲೋಕ ತ್ಯಜಿಸಿದ್ದಾರೆ. ಮುಂಬೈನಲ್ಲಿ ವಾಸವಿದ್ದ ಶ್ರದ್ಧಾ ತಂದೆ ವಿಕಾಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಮಗಳ ಬರ್ಬರ ಸಾವಿನಿಂದ ಅವರು ಮಾನಸಿಕವಾಗಿ ತೀರಾ ಕುಗ್ಗಿ ಹೋಗಿದ್ದರು. ಮಗಳ ಹಂತಕನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬಯಸಿದ್ದರು.