Publish Date: Thu, 20 Oct 2016 (15:46 IST)
Updated Date: Thu, 20 Oct 2016 (15:53 IST)
ಮನೆಗೆ ಮರಳಲು ಒಪ್ಪದ ಪತ್ನಿಗೆ, ಪೈಶಾಚಿಕ ಮನಸ್ಥಿತಿಯ ಪತಿ ಅ್ಯಸಿಡ್ ಎರಚಿದ ಹೇಯ ಘಟನೆ ನವದೆಹಲಿಯ ರೋಹಿಣಿಯಲ್ಲಿ ನಡೆದಿದೆ.
ಆರೋಪಿಯನ್ನು 34 ವರ್ಷದ ಪ್ರದೀಪ್ ಸಿಂಗ್(34) ಎಂದು ಗುರುತಿಸಲಾಗಿದ್ದು ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಆತನನ್ನು ಬಂಧಿಸಲಾಗಿದೆ. ಆತ 19 ವರ್ಷದ ಪತ್ನಿ ಅಮೃತ್ ಕೌರ್ ಮೇಲೆ ಅ್ಯಸಿಡ್ ಎರಚಿದ್ದಾನೆ.
ಮಂಗಳವಾರ ಅಮೃತ್ ಕೌರ್ ತನ್ನ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಕೌರ್ ಕಳೆದ 10 ದಿನಗಳ ಹಿಂದೆ ಪತಿಯ ಮನೆಯನ್ನು ತ್ಯಜಿಸಿ ಅಮ್ಮನ ಮನೆಯಲ್ಲಿ ವಾಸವಾಗಿದ್ದಳು. ಎಷ್ಟೇ ಒತ್ತಾಯಿಸಿದರೂ ಪತ್ನಿ ಮನೆಗೆ ಮರಳಲು ಒಪ್ಪುತ್ತಿಲ್ಲವೆಂದು ಪ್ರದೀಪ್ ಆಕೆಯ ಮೇಲೆ ಈ ರೀತಿಯಾಗಿ ಸೇಡು ತೀರಿಸಿಕೊಂಡಿದ್ದಾನೆ.
ರಾತ್ರಿ 8.30ರ ಸುಮಾರಿಗೆ ಕೌರ್ ತನ್ನ ಸಹೋದರಿ ಇಶಾ ಜತೆಯಲ್ಲಿ ಚಿಕ್ಕಮ್ಮನ ಮನೆ ಕಡೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಭೇಟಿಯಾದ ಸಿಂಗ್ ಅವರಿಬ್ಬರನ್ನು ಒತ್ತಾಯದಿಂದ ಹತ್ತಿರದ ಪಾರ್ಕ್ ಒಂದಕ್ಕೆ ಕರೆದೊಯ್ದ. ಅಲ್ಲಿ ಆತನ ಕಸಿನ್ಸ್ ಜೀತು ಮತ್ತು ಕಪಿಲ್ ಇದ್ದರು.
ಬಳಿಕ ತಂಗಿಯ ಹಿಂದೆಯೇ ಪತ್ನಿಗೆ ಥಳಿಸಲು ಪ್ರಾರಂಭಿಸಿದ ಆತನಿಗೆ ಕೌರ್ ಸಹ ಅನೇಕ ಬಾರಿ ಕಪಾಳ ಮೋಕ್ಷ ಮಾಡಿದ್ದಾಳೆ. ತಕ್ಷಣ ಅಡಗಿಸಿಟ್ಟುಕೊಂಡಿದ್ದ ಅ್ಯಸಿಡ್ ಬಾಟಲ್ ಹೊರ ತೆಗೆದ ಆತ ಆಕೆಯ ಮುಖಕ್ಕೆ ಹಾಕಲು ಪ್ರಯತ್ನಿಸಿದ್ದಾನೆ.
ನನ್ನ ಮುಖಕ್ಕೆ ಅ್ಯಸಿಡ್ ಹಾಕಲು ಪ್ರಯತ್ನಿಸಿದ. ಆದರೆ ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಆದರೆ ಅ್ಯಸಿಡ್ ಮುಖ ಮತ್ತು ಹೊಟ್ಟೆಯ ಮೇಲೆ ಬಿತ್ತು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೌರ್ ತಿಳಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ