Select Your Language

Notifications

webdunia
webdunia
webdunia
webdunia

ಕಾಶ್ಮೀರದಲ್ಲಿ ಕಲ್ಲು ತೂರಾಟ ಸಮರ್ಥನೆ, ಕ್ಷುಲ್ಲಕ ರಾಜಕೀಯ: ಅರುಣ್ ಜೇಟ್ಲಿ

ಕಾಶ್ಮೀರದಲ್ಲಿ ಕಲ್ಲು ತೂರಾಟ ಸಮರ್ಥನೆ, ಕ್ಷುಲ್ಲಕ ರಾಜಕೀಯ: ಅರುಣ್ ಜೇಟ್ಲಿ
ಸಂಬಾ , ಸೋಮವಾರ, 22 ಆಗಸ್ಟ್ 2016 (17:06 IST)
ಕಾಶ್ಮೀರದಲ್ಲಿ ಕಲ್ಲು ತೂರಾಟವಾಗುತ್ತಿರುವುದನ್ನು ಸಮರ್ಥಿಕೊಳ್ಳುವವರು ಕ್ಷುಲ್ಲಕ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. 
 
ಜನಸಂಘದ ಸ್ಥಾಪಕ, ಬಿಜೆಪಿ ಹರಿಕಾರ ಪ್ರೇಮನಾಥ್ ದೋಗ್ರಾ ಅವರ ಸ್ಮರಣಾರ್ಥ ಸಂಬಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನ್ನಾಡುತ್ತಿದ್ದ ಅವರು, ಕಾಶ್ಮೀರದಲ್ಲಿ ದಂಗೆ ಮತ್ತು ಕಲ್ಲು ತೂರಾಟವನ್ನು ಸಮರ್ಥಿಸಿಕೊಳ್ಳುವವರು ಕ್ಷುಲ್ಲಕ ರಾಜಕೀಯದ ಹೊರತಾಗಿ ತಮ್ಮ ತಲೆಯಲ್ಲಿ ಮತ್ತೇನನ್ನೂ ಹೊಂದಿಲ್ಲ ಎಂದು ಗುಡುಗಿದ್ದಾರೆ. 
 
ಕೆಲವರು ಹೊರಗಡೆ ನಿಂತುಕೊಂಡು ಕಾಶ್ಮೀರದಲ್ಲಿ ಮಾನವ ಹಕ್ಕಿನ ಬಗ್ಗೆ ಮಾತನ್ನಾಡುತ್ತಾರೆ. ಅವರೆಂದಾದರೂ ಕಣಿವೆನಾಡಿಗೆ ಭೇಟಿ ಕೊಟ್ಟು ಕರ್ತವ್ಯವನ್ನು ನಿರ್ವಹಿಸುವಾಗ ಗಾಯಗೊಂಡಿರುವ ಭದ್ರತಾ ಸಿಬ್ಬಂದಿಯನ್ನು ನೋಡಿದ್ದಾರಾ? ಎಂದು ಅವರು ಪ್ರಶ್ನಿಸಿದ್ದಾರೆ. 
 
1947ರಲ್ಲಿ ಭಾರತ ಸ್ವಾತಂತ್ರವಾದಾಗ ಅದು ರಚನೆಯಾಗಿದ್ದು ಕೇವಲ ಶಾಂತಿ ಮತ್ತು ಅಭಿವೃದ್ಧಿಗಾಗಿ, ಆದರೆ ಪಾಕಿಸ್ತಾನ ಹುಟ್ಟಿದ್ದು ಕೇವಲ ಭಾರತವನ್ನು ಒಡೆಯಲು ಎಂದು ಜೇಟ್ಲಿ ಹೇಳಿದ್ದಾರೆ.
 
ಮೂರು ಯುದ್ಧಗಳಲ್ಲಿ ಭಾರತದ ಕೈಯ್ಯಿಂದ ಹೀನಾಯ ಸೋಲು ಕಂಡ ಪಾಕಿಸ್ತಾನ 1990ರಲ್ಲಿ ನಮ್ಮ ವಿರುದ್ಧ ಪ್ರಾಕ್ಸಿ ಯುದ್ಧವನ್ನು ಪ್ರಾರಂಭಿಸಿತು. 2008-1010ರಲ್ಲಿ ಅವರು ತಮ್ಮ ಪ್ರಾಕ್ಸಿ ಕದನಕ್ಕೆ ಕಲ್ಲು ತೂರಾಟದ ಹೊಸ ಮುಖವನ್ನು ಪರಿಚಯಿಸಿದರು. ಮತ್ತೀಗ ಆಗುತ್ತಿರುವುದು ಸಹ ಅದೇ. ಉಗ್ರವಾದ ಮತ್ತು ಕಲ್ಲು ತೂರಾಟವನ್ನು ದೃಢವಾಗಿ ವ್ಯವಹರಿಸಬೇಕು. ಇಂತಹ ಸನ್ನಿವೇಶಗಳನ್ನು ನಿಭಾಯಿಸುವಾಗ ಯಾವುದೇ ಶಿಥಿಲತೆಯನ್ನು ತೋರಬಾರದು ಎಂದಿದ್ದಾರೆ ಜೇಟ್ಲಿ. 
 
ಪ್ರಧಾನಿ ಕಚೇರಿಯ ಸಹಾಯಕ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸಹ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ನಟಿ 'ರಮ್ಯಾ ಹಠಾವೋ' ದೇಶ ಬಚಾವೋ ಚಳುವಳಿ ಆರಂಭ!