ಪಾಕಿಸ್ತಾನ ಪರ ಹೇಳಿಕೆ ನೀಡಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ವಿರುದ್ಧ ಯುವ ಭಾರತ ಸಂಘಟನೆ 'ರಮ್ಯಾ ಹಠಾವೋ' ದೇಶ ಬಚಾವೋ ಚಳುವಳಿಯನ್ನು ಹಮ್ಮಿಕೊಂಡಿದೆ.
ಪಾಕ್ ಪರ ಹೇಳಿಕೆ ನೀಡಿರುವ ಮಾಜಿ ಸಂಸದೆ ರಮ್ಯಾ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ಯುವ ಭಾರತ ಸಂಘಟನೆ ಪೋಸ್ಟ್ ಕಾರ್ಡ್ ಚಳುವಳಿಯನ್ನು ಆರಂಭಿಸಲು ನಿರ್ಧರಿಸಿದೆ.
ರಮ್ಯಾ ದೇಶ ಬಿಟ್ಟು ತೊಲಗುವಂತೆ ಹಾಗೂ ಅವರು ಪಾಕಿಸ್ತಾನದಲ್ಲೇ ನೆಲೆಸುವಂತೆ ಆಗ್ರಹಿಸಿ ಕಾರ್ಯಕರ್ತರು ಮೈಸೂರಿನ ಚಾಮುಂಡಿಪುರಂ ಅಂಚೆ ಕಚೇರಿಯ ಮೂಲಕ ರಮ್ಯಾ ಮನೆ ವಿಳಾಸಕ್ಕೆ ಪೋಸ್ಟ್ ಕಾರ್ಡ್ ರವಾನೆ ಮಾಡಿದ್ದಾರೆ.
ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ತಾನ ನರಕವಿದ್ದಂತೆ ಅಂತಾ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ನಟಿ ರಮ್ಯಾ ಅವರು ಪಾಕಿಸ್ತಾನದಲ್ಲಿ ಹಾಗೇನಿಲ್ಲ. ಅಲ್ಲಿನ ಜನರು ನಮ್ಮಂತೆ ಒಳ್ಳೆಯವರು ಅಂತಾ ಹೇಳುವ ಮೂಲಕ ಪಾಕಿಸ್ತಾನವನ್ನು ಹಾಡಿ ಹೊಗಳಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.