Publish Date: Fri, 17 Jul 2020 (11:11 IST)
Updated Date: Fri, 17 Jul 2020 (11:13 IST)
ನವದೆಹಲಿ: ಚೀನಾ ಜತೆಗಿನ ಗಡಿ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇಹ್ ಗಡಿಗೆ ಭೇಟಿ ನೀಡಿದ್ದಾರೆ.
ಇಂದು ಇಡೀ ದಿನ ಗಡಿಯಲ್ಲಿ ಸೇನಾ ಸಿಬ್ಬಂದಿಗಳ ಜತೆ ಕಳೆಯಲಿರುವ ರಕ್ಷಣಾ ಸಚಿವರು ಗಡಿಯಲ್ಲಿ ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ.
ರಕ್ಷಣಾ ಸಚಿವರಿಗೆ ರಕ್ಷಣಾ ಇಲಾಖೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂಎಂ ನರಾವಣೆ ಸಾಥ್ ನೀಡಲಿದ್ದಾರೆ. ಭಾರತ-ಚೀನಾ ಗಡಿ ಸಂಘರ್ಷದ ಬಳಿಕ ರಕ್ಷಣಾ ಸಚಿವರ ಈ ಭೇಟಿ ಮಹತ್ವ ಪಡೆದಿದೆ.