ಕಠ್ಮಂಡು: ನೇಪಾಳದಲ್ಲಿ ನಡೆಯುತ್ತಿರುವ ಜನರಲ್ ಝಡ್ ಪ್ರತಿಭಟನೆ ಹಿಂಸಚಾರಕ್ಕೆ ತಿರುಗಿದ ಪರಿಣಾಮ ಇದೀಗ ಮೃತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಈ ಸಂಬಂಧ ದೇಶದ ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯ ಶುಕ್ರವಾರ ಬಿಡುಗಡೆ ವರದಿಯನ್ನು ಬಿಡುಗಡೆ ಮಾಡಿದೆ.
ಈ ಪೈಕಿ 30 ವ್ಯಕ್ತಿಗಳು ಗುಂಡೇಟಿನಿಂದ ಸಾವನ್ನಪ್ಪಿದ್ದರೆ, 21 ಜನರು ಸುಟ್ಟಗಾಯಗಳಿಗೆ ಬಲಿಯಾಗಿದ್ದಾರೆ. ಪೋಸ್ಟ್, ನೇಪಾಳ ಪೋಲೀಸ್ ಸಹ ವಕ್ತಾರ ರಮೇಶ್ ಥಾಪಾ ಅವರು ಪ್ರತಿಕ್ರಿಯಿಸಿ, ಸಾವನ್ನಪ್ಪಿದವರಲ್ಲಿ ಒಬ್ಬ ಭಾರತೀಯ ಮತ್ತು ಮೂವರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ ಎಂದು ಹೇಳಿದರು.
ಒಟ್ಟು ಮೃತರ ಪೈಕಿ 36 ಶವಗಳನ್ನು ಮಹಾರಾಜ್‌ಗಂಜ್‌ನ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ಶುಕ್ರವಾರ ಪ್ರಾರಂಭವಾಯಿತು.
ಮಹಾರಾಜ್‌ಗಂಜ್‌ನಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಯು ಮರಣೋತ್ತರ ಪರೀಕ್ಷೆಯ ನಂತರ ಜೆನ್ ಝಡ್ ಪ್ರತಿಭಟನಾಕಾರರ ಮೃತ ದೇಹಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ.
ಸೆಪ್ಟಂಬರ್ 8, 2025 ರಂದು ಕಠ್ಮಂಡು ಮತ್ತು ಪೋಖರಾ, ಬಟ್ವಾಲ್ ಮತ್ತು ಬಿರ್‌ಗುಂಜ್ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು.