Webdunia - Bharat's app for daily news and videos

Install App

ಅತ್ಯಾಚಾರ, ಮತಾಂತರಕ್ಕೆ ಮರಣದಂಡನೆ ಶಿಕ್ಷೆ: ಮಹಿಳಾ ದಿನಾಚರಣೆಯಂದು ಸಿಎಂ ಘೋಷಣೆ

Sampriya
ಭಾನುವಾರ, 9 ಮಾರ್ಚ್ 2025 (11:36 IST)
Photo Courtesy X
ಭೋಪಾಲ್: ಬಾಲಕಿಯರ ಮೇಲೆ ಅತ್ಯಾಚಾರ ಮಾಡುವವರಿಗೆ, ಹುಡುಗಿಯರನ್ನು ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸುವವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಎಚ್ಚರಿಸಿದ್ದಾರೆ.

ಮುಗ್ಧ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವವರ ವಿರುದ್ಧ ನಮ್ಮ ಸರ್ಕಾರ ತುಂಬಾ ಕಟ್ಟುನಿಟ್ಟಾಗಿದೆ. ಈ ನಿಟ್ಟಿನಲ್ಲಿ ಮರಣದಂಡನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಭೋಪಾಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಘೋಷಣೆ ಮಾಡಿದರು.

ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಲ್ಲಿ ಧಾರ್ಮಿಕ ಮತಾಂತರಕ್ಕೆ ಮರಣದಂಡನೆ ವಿಧಿಸುವ ಅವಕಾಶವನ್ನು ಸಹ ಕಲ್ಪಿಸಲಾಗುತ್ತದೆ. ಕಾನೂನುಬಾಹಿರ ಧಾರ್ಮಿಕ ಮತಾಂತರಗಳಲ್ಲಿ ತೊಡಗಿರುವವರನ್ನು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಯಾದವ್  ಎಚ್ಚರಿಸಿದರು.

ನಮ್ಮ ಸರ್ಕಾರ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಸ್ವಾಭಿಮಾನಕ್ಕೆ ಸಮರ್ಪಿತವಾಗಿದೆ. ಮಧ್ಯಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವರಿಗೆ ಮರಣದಂಡನೆ ಶಿಕ್ಷೆ ಕಲ್ಪಿಸಿದ ನಂತರ ರಾಜ್ಯದಲ್ಲಿ ಹೆಣ್ಣು ಮಕ್ಕಳ ಧಾರ್ಮಿಕ ಮತಾಂತರಿಸುವವರಿಗೂ ಮರಣದಂಡನೆ ವಿಧಿಸುವ ಅವಕಾಶವನ್ನು ಜಾರಿಗೆ ತರಲಾಗುವುದು ಎಂದು ಎಕ್ಸ್‌ನಲ್ಲಿ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಹೇಳಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಭಾರತದಲ್ಲಿರುವ ಪಾಕ್‌ ಮಹಿಳೆ

Sofiya Qureshi, ಪಾಕ್‌ ಸೇನೆಯ ಪ್ರಯತ್ನವೆಲ್ಲ ವಿಫಲ: ಕರ್ನಲ್ ಸೋಫಿಯಾ ಖುರೇಷಿ

Operation Sindoor, ಇದು ನಮಗೆ ಹೆಮ್ಮೆಯ ಸಂಗತಿ: ರಾಜನಾಥ್ ಸಿಂಗ್‌

Operation Sindoor: ರಾಜ್ಯ ಸರ್ಕಾರದಿಂದ ನಾಳೆ ತಿರಂಗಾ ಯಾತ್ರೆ

ಭಾರತ ದಾಳಿ ಭೀತಿ: ಲಾಹೋರ್‌ನಿಂದ ಕೂಡಲೇ ಹೊರಡುವಂತೆ ನಾಗರಿಕರಿಗೆ ಯುಎಸ್‌ ಸೂಚನೆ

ಮುಂದಿನ ಸುದ್ದಿ
Show comments