Select Your Language

Notifications

webdunia
webdunia
webdunia
webdunia

ಅತ್ಯಾಚಾರ, ಮತಾಂತರಕ್ಕೆ ಮರಣದಂಡನೆ ಶಿಕ್ಷೆ: ಮಹಿಳಾ ದಿನಾಚರಣೆಯಂದು ಸಿಎಂ ಘೋಷಣೆ

Madhya Pradesh Chief Minister Mohan Yadav

Sampriya

ಭೋಪಾಲ್ , ಭಾನುವಾರ, 9 ಮಾರ್ಚ್ 2025 (11:36 IST)
Photo Courtesy X
ಭೋಪಾಲ್: ಬಾಲಕಿಯರ ಮೇಲೆ ಅತ್ಯಾಚಾರ ಮಾಡುವವರಿಗೆ, ಹುಡುಗಿಯರನ್ನು ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸುವವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಎಚ್ಚರಿಸಿದ್ದಾರೆ.

ಮುಗ್ಧ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವವರ ವಿರುದ್ಧ ನಮ್ಮ ಸರ್ಕಾರ ತುಂಬಾ ಕಟ್ಟುನಿಟ್ಟಾಗಿದೆ. ಈ ನಿಟ್ಟಿನಲ್ಲಿ ಮರಣದಂಡನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಭೋಪಾಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಘೋಷಣೆ ಮಾಡಿದರು.

ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಲ್ಲಿ ಧಾರ್ಮಿಕ ಮತಾಂತರಕ್ಕೆ ಮರಣದಂಡನೆ ವಿಧಿಸುವ ಅವಕಾಶವನ್ನು ಸಹ ಕಲ್ಪಿಸಲಾಗುತ್ತದೆ. ಕಾನೂನುಬಾಹಿರ ಧಾರ್ಮಿಕ ಮತಾಂತರಗಳಲ್ಲಿ ತೊಡಗಿರುವವರನ್ನು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಯಾದವ್  ಎಚ್ಚರಿಸಿದರು.

ನಮ್ಮ ಸರ್ಕಾರ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಸ್ವಾಭಿಮಾನಕ್ಕೆ ಸಮರ್ಪಿತವಾಗಿದೆ. ಮಧ್ಯಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವರಿಗೆ ಮರಣದಂಡನೆ ಶಿಕ್ಷೆ ಕಲ್ಪಿಸಿದ ನಂತರ ರಾಜ್ಯದಲ್ಲಿ ಹೆಣ್ಣು ಮಕ್ಕಳ ಧಾರ್ಮಿಕ ಮತಾಂತರಿಸುವವರಿಗೂ ಮರಣದಂಡನೆ ವಿಧಿಸುವ ಅವಕಾಶವನ್ನು ಜಾರಿಗೆ ತರಲಾಗುವುದು ಎಂದು ಎಕ್ಸ್‌ನಲ್ಲಿ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತೇಜಸ್ವಿ ಸೂರ್ಯ-ಶಿವಶ್ರೀ ರಿಸೆಪ್ಷನ್‌ಗೆ ಅರಮನೆ ಮೈದಾನ ಸಜ್ಜು: ಡ್ರೈಫ್ರೋಟ್ಸ್‌, ಬೊಕ್ಕೆ ಅವಕಾಶವಿಲ್ಲ ಎಂದ ಸಂಸದ