Select Your Language

Notifications

webdunia
webdunia
webdunia
webdunia

ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್

ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್
ನವದೆಹಲಿ , ಮಂಗಳವಾರ, 20 ಜೂನ್ 2023 (07:20 IST)
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಏರ್ಶೋದ ಮೊದಲ ದಿನವೇ ಏರ್ಬಸ್ ಕಂಪನಿ ಇಂಡಿಗೋ ಜೊತೆಗಿನ ವ್ಯವಹಾರದ ಡೀಲ್ ಘೋಷಣೆ ಮಾಡಿದೆ.  ಹಲವು ಸುತ್ತಿನ ಮಾತುಕತೆಯ ಬಳಿಕ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಖರೀದಿ ಒಪ್ಪಂದದ ಮೊತ್ತ ಎಷ್ಟು ಎನ್ನುವುದು ಅಧಿಕೃತವಾಗಿ ತಿಳಿಸದೇ ಇದ್ದರೂ 55 ಶತಕೋಟಿ ಡಾಲರ್ ಡೀಲ್ ಎಂದು ವರದಿಯಾಗಿದೆ. ಈ ಐತಿಹಾಸಿಕ ಒಪ್ಪಂದಕ್ಕೆ ಇಂಡಿಗೋ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟೀಯಾ ಮತ್ತು ಏರ್ಬಸ್ ಸಿಇಒ ಗುಯಿಲೌಮ್ ಫೌರಿ ಸಹಿ ಹಾಕಿದರು. 

2030 ಮತ್ತು 2035ರ ಸಮಯದಲ್ಲಿ ವಿಮಾನವನ್ನು ಏರ್ಬಸ್ ಕಂಪನಿ ಇಂಡಿಗೋಗೆ ವಿತರಣೆ ಮಾಡಲಿದೆ. ಇದು ಕೇವಲ ಪ್ರಾರಂಭ ಅಷ್ಟೇ. ಭಾರತ ಬೆಳವಣಿಗೆ ಮತ್ತು ಭಾರತೀಯ ವಾಯುಯಾನ ಮಾರುಕಟ್ಟೆಯ ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ನಮಗೆ ನೀಡಲು ಇದು ಸರಿಯಾದ ಸಮಯ ಎಂದು ಏರ್ಬಸ್ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಕ್ಕೆ ಅಕ್ಕಿ ನೀಡದ ಹಿಂದೆ ಷಡ್ಯಂತ್ರ ಇದೆ- ಡಿಕೆಶಿ