ಮಹಾರಾಷ್ಟ್ರ : ಭಾರತದಲ್ಲಿ ಡೆಡ್ಲಿ ಕೊರೊನಾ ಮತ್ತೊಂದು ಬಲಿಪಡೆದುಕೊಂಡಿದ್ದು, ಮಹಾರಾಷ್ಟ್ರದಲ್ಲಿ ಮತ್ತೊಬ್ಬ ವ್ಯಕ್ತಿ ಕೊರೊನಾ ಸೋಂಕಿನಿಂದ ಸಾವನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತ ಮಹಿಳೆ ಸಾವನಪ್ಪಿದ್ದು, ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 4 ಜನರು ಕೊರೊನಾಗೆ ಬಲಿಯಾದಂತಾಗಿದೆ. ಭಾರತದಲ್ಲಿ ಕಾಶ್ಮೀರ ಹಾಗೂ ಮಹಾರಾಷ್ಟ್ರ ಸೇರಿ ಇಂದು ಒಂದೇ ದಿನ ಕೊರೊನಾಗೆ 2 ಸಾವು ಸಂಭವಿಸಿದ್ದು, ಈವರೆಗೆ ಭಾರತದಲ್ಲಿ ಕೊರೊನಾಗೆ 15 ಮಂದಿ ಬಲಿಯಾದಂತಾಗಿದೆ.