ಹೆಚ್ಚು ಟಿವಿ ನೋಡಬೇಡ ಎಂದು ತಾಯಿ ಬೈದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ಟಿವಿ ನೋಡಬೇಡ ಎಂದು ತಾಯಿ ಗದರಿದ್ದಕ್ಕೆ,ಯುವತಿ ರಾತ್ರಿ ಕೋಣೆಗೆ ಹೋಗಿ ದುಪಟ್ಟಾ ತೆಗೆದುಕೊಂಡು ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಬಾಲಕಿಯನ್ನು ಮನಿಷಾ ಎಂದು ಗುರುತಿಸಲಾಗಿದೆ.