ಅಸಾನಿ ಚಂಡಮಾರುತ ಇಂದು ಮುಂಜಾನೆ ಆಂಧ್ರಪ್ರದೇಶ ಕಡಲ ತೀರಕ್ಕೆ ಅಪ್ಪಳಿಸಿದೆ.
ಕಾಕಿನಾಡ ಜಿಲ್ಲೆಯ ಕಡಲ ತೀರದಲ್ಲಿ ಕೇಂದ್ರೀಕೃತವಾದ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಮಳೆ ಹಾಗೂ ಗಾಳಿ ಬೀಸುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಅಸಾನಿ ಚಂಡಮಾರುತ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ನಂತರ ಬಂಗಾಳದತ್ತ ತಿರುಗಿದೆ ಎಂದು ಹೇಳಲಾಗಿದೆ.