Publish Date: Thu, 07 Jan 2021 (07:26 IST)
Updated Date: Thu, 07 Jan 2021 (07:28 IST)
ನವದೆಹಲಿ : ಆನ್ ಲೈನ್ ನಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ರಾಜಸ್ಥಾನ್ ಬಾರತ್ ಪುರ ಜಿಲ್ಲೆಯ ಮೇವತ್ ಪ್ರದೇಶದ ಆರು ಮಂದಿಯನ್ನು ದೆಹಲಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಸಂತ್ರಸ್ತೆಯೊಂದಿಗೆ ಸ್ನೇಹ ಬೆಳೆಸುತ್ತಾನೆ. ಬಳಿಕ ಅವರು ವಿಡಿಯೋ ಚಾಟ್ ಮಾಡಲು ಮನವೊಲಿಸುತ್ತಾರೆ. ನಂತರ ವಿಡಿಯೋ ಕರೆಯನ್ನು ಸೆರೆ ಹಿಡಿದು ಅಶ್ಲೀಲ ತುಣುಕುಗಳನ್ನು ಸೇರಿಸಲು ವಿಷಯಗಳನ್ನು ಸಂಗ್ರಹಿಸಿ ಬಳಿಕ ಸಂತ್ರಸ್ತೆಯನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ.
ಇದೀಗ ಪೊಲೀಸರು ಇಂತಹ ಗ್ಯಾಂಗ್ ನ್ನು ಸೆರೆ ಹಿಡಿದು ಅವರ ಬಳಿ ಇದ್ದ ಕನಿಷ್ಠ 40 ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ.