ಅಯೋಧ್ಯೆಯಲ್ಲಿ ಪ್ರತಿಷ್ಠಾ ಮಹೋತ್ಸವಕ್ಕೆ ಜನಸಾಗರ: ಶ್ರೀರಾಮನ ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ

Sampriya
ಶನಿವಾರ, 11 ಜನವರಿ 2025 (20:21 IST)
Photo Courtesy X
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಇಂದು ರಾಮಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು.

ಪ್ರತಿಷ್ಠಾ ದ್ವಾದಶಿಯಂದು ಬಾಲರಾಮಮೂರ್ತಿಗೆ ಮಹಾ ಅಭಿಷೇಕ ಮಾಡಲಾಯಿತು. ನಂತರ ಅವರ ಮಂಗಲ ದರ್ಶನ ನಡೆಯಿತು. ಈ ವಿಶೇಷ ದಿನದಂದು ರಾಮಮಂದಿರವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಮಲಲ್ಲಾನ ದರ್ಶನ ಪಡೆದರು.  

ಅಯೋಧ್ಯೆಯಲ್ಲಿ ಹಬ್ಬದ ವಾತಾವರಣವೇ ಇತ್ತು. ಭಕ್ತರು ನೃತ್ಯ ಮಾಡುತ್ತಾ ಮತ್ತು ಹಾಡುತ್ತ ಮೆರವಣಿಗೆ ಸಾಗಿ ರಾಮಲಲ್ಲಾನ ಆಸ್ಥಾನಕ್ಕೆ ಬಂದ ದೃಶ್ಯಗಳು ಕಂಡುಬಂದವು. ಎಲ್ಲರೂ ಶ್ರೀರಾಮನ ಭಕ್ತಿಯಲ್ಲಿ ಮಿಂದೆದ್ದರು. ಆರಾಧ್ಯ ದೈವ ರಾಮನ ದರ್ಶನಕ್ಕೆ ಕುಟುಂಬ ಸಮೇತರಾಗಿ ಭಕ್ತರು ಆಗಮಿಸಿದ್ದರು.
 

ಧಾರ್ಮಿಕ ಕಾರ್ಯಗಳಲ್ಲಿ, ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ಇದಾದ ನಂತರ ಮಹಾ ಆರತಿ ಮಾಡಲಾಯಿತು. ನಂತರ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ರಾಜಭೋಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ರಾಮಲಲ್ಲಾ ವಿರಾಜಮಾನನಾಗಿರುವ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರ ನೇತೃತ್ವದಲ್ಲಿ ಮಹಾ ಆರತಿ ನೆರವೇರಿಸಲಾಯಿತು. ಮಹಾ ಆರತಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.  

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ಮಂದಿರ ಸಂಕೀರ್ಣದ ಅಂಗದ್ ತಿಲಾದಲ್ಲಿ ಪ್ರತಿಷ್ಠಾ ದ್ವಾದಶಿ ಸಮಾರಂಭವನ್ನು ಉದ್ಘಾಟಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಸಮಾಧಿ ಬಗ್ಗೆ ಮಾತು: ಸಂಸತ್ ನಲ್ಲಿ ಸೋನಿಯಾ ಕ್ಷಮೆಗೆ ಬಿಜೆಪಿ ಪಟ್ಟು

ವಿಚಾರಣೆ ಬಿಟ್ಟು ದೆಹಲಿಯಿಂದ ತುರ್ತಾಗಿ ರಾಜ್ಯಕ್ಕೆ ವಾಪಾಸ್ಸಾದ ಡಿಕೆ ಶಿವಕುಮಾರ್, ಕಾರಣ ಗೊತ್ತಾ

ಲೈಂಗಿಕ ದೌರ್ಜನ್ಯ ಆರೋಪದಡಿ ಶಿಕ್ಷಕನಿಗೆ ಚಪ್ಪಲಿ ಹಾರದ ಮೆರವಣಿಗೆ: ಪೊಲೀಸ್ ಅಧಿಕಾರಿಗಳ ಅಮಾನತು

ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ವೋಟ್ ಚೋರಿ ಕಾರಣ ಎಂದ ರಾಹುಲ್ ಗಾಂಧಿ ಟ್ರೋಲ್ video

ನಿವೃತ್ತ ಖಡಕ್‌ ಐಪಿಎಸ್ ಅಧಿಕಾರಿ ಶ್ರೀಲೇಖಾಗೆ ಒಲಿಯುತ್ತಾ ತಿರುವನಂತಪುರಂ ಬಿಜೆಪಿ ಮೇಯರ್‌ ಪಟ್ಟ

ಮುಂದಿನ ಸುದ್ದಿ
Show comments