Publish Date: Thu, 29 Apr 2021 (09:52 IST)
Updated Date: Thu, 29 Apr 2021 (09:53 IST)
ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ನಿನ್ನೆಯಿಂದಲೇ ಕೊವಿನ್ ಮತ್ತು ಆರೋಗ್ಯ ಸೇತು ಆಪ್ ಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಆದರೆ ಕೊವಿನ್ ವೆಬ್ ಸೈಟ್ ನಲ್ಲಿ ನೋಂದಣಿ ಆರಂಭವಾದ ತಕ್ಷಣ ಲಕ್ಷಾಂತರ ಜನರು ನೋಂದಣಿಗೆ ಪ್ರಯತ್ನಿಸಿದ್ದರಿಂದ ಕೆಲವು ಕಾಲ ಅಡೆತಡೆಯಾಗಿದೆ. ಇದಾದ ಬಳಿಕ ತೊಂದರೆ ನಿವಾರಿಸಲಾಗಿದೆ.
ಕೊರೋನಾ ವ್ಯಾಪಕವಾಗಿ ಹರಡಿರುವುದರಿಂದ ಲಸಿಕೆ ಪಡೆದುಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಇದೀಗ ಲಸಿಕೆ ಕೇಂದ್ರದಲ್ಲೂ ಇದೇ ವಾತಾವರಣ ಕಂಡುಬರಲಿರುವುದು ಖಚಿತ.