Select Your Language

Notifications

webdunia
webdunia
webdunia
webdunia

ಎರಡನೇ ಡೋಸ್ ಕೊವಿಶೀಲ್ಡ್ ಲಸಿಕೆ ಪಡೆಯಲು ಇಷ್ಟು ದಿನ ಅಂತರವಿರಬಹುದು

ಎರಡನೇ ಡೋಸ್ ಕೊವಿಶೀಲ್ಡ್ ಲಸಿಕೆ ಪಡೆಯಲು ಇಷ್ಟು ದಿನ ಅಂತರವಿರಬಹುದು
ನವದೆಹಲಿ , ಶುಕ್ರವಾರ, 14 ಮೇ 2021 (09:24 IST)
ನವದೆಹಲಿ: ಒಂದನೇ ಹಂತದ ಕೊವಿಶೀಲ್ಡ್ ಲಸಿಕೆ ಪಡೆದುಕೊಂಡ ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು 12 ರಿಂದ 16 ವಾರಗಳ ಅಂತರ ಇಡಬಹುದು ಎಂದು ತಜ್ಞರ ಸಮಿತಿ ಹೇಳಿದೆ.


ಈಗಾಗಲೇ ಒಂದು ಡೋಸ್ ಪಡೆದುಕೊಂಡವರು, ಇನ್ನೊಂದು ಡೋಸ್ ಪಡೆಯಲು ತುಂಬಾ ಸಮಯದ ಅಂತರವಾದರೆ ಲಸಿಕೆ ಪರಿಣಾಮಕಾರಿಯಾಗದೇ ಹೋದರೆ ಎಂಬ ಆತಂಕದಲ್ಲಿದ್ದಾರೆ. ಅಂತಹವರಿಗೆ ತಜ್ಞರ ವರದಿ ಸಮಾಧಾನ ನೀಡಲಿದೆ. ಇದುವರೆಗೆ 4-8 ವಾರಗಳ ಅಂತರವಿರಬೇಕು ಎಂಬ ನಿಯಮವಿತ್ತು.

ಅಷ್ಟೇ ಅಲ್ಲದೆ, ಕರ್ನಾಟಕದಲ್ಲಂತೂ 18 ವರ್ಷ ಮೇಲ್ಪಟ್ಟವರಿಗೆ ಸದ್ಯಕ್ಕೆ ಲಸಿಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಎರಡನೇ ಹಂತದ ಲಸಿಕೆಗೆ ವಿಳಂಬವಾದೀತು ಎಂಬ ಆತಂಕ ಇದರಿಂದ ದೂರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಲಸಿಕೆ ಸೆಲೆಬ್ರಿಟಿಗಳಿಗೆ ಮಾತ್ರ ಸಿಗ್ತಿದೆ ಯಾಕೆ?