Select Your Language

Notifications

webdunia
webdunia
webdunia
webdunia

Covid 19: ದೇಶದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೀಗಿದೆ

ಕೋವಿಡ್ 19

Sampriya

ನವದೆಹಲಿ , ಭಾನುವಾರ, 8 ಜೂನ್ 2025 (15:42 IST)
ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 48 ಗಂಟೆಗಳಲ್ಲಿ 769 ಹೊಸ ಸೋಂಕುಗಳು ವರದಿಯಾಗಿದ್ದು ಈ ಮೂಲಕ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 6,000 ಏರಿಕೆಯಾಗಿದೆ.

ಇನ್ನೂ ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದೆ. ನಂತರ ಗುಜರಾತ್, ಪಶ್ಚಿಮ ಬಂಗಾಳ ಮತ್ತು ದೆಹಲಿ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ, ಕೇಂದ್ರವು ಸೌಲಭ್ಯ ಮಟ್ಟದ ಸಿದ್ಧತೆಯನ್ನು ಪರಿಶೀಲಿಸಲು ಅಣಕು ಅಭ್ಯಾಸಗಳನ್ನು ನಡೆಸುತ್ತಿದೆ ಮತ್ತು ಆಮ್ಲಜನಕ, ಐಸೋಲೇಷನ್ ಹಾಸಿಗೆಗಳು, ವೆಂಟಿಲೇಟರ್‌ಗಳು ಮತ್ತು ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತದಲ್ಲಿ 6,133 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಮತ್ತು ಕಳೆದ 24 ಗಂಟೆಗಳಲ್ಲಿ ಇನ್ನೂ ಆರು ಸಾವುಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ. 

ಈ ವರ್ಷದ ಜನವರಿಯಿಂದ, ದೇಶದಲ್ಲಿ 65 ಸಾವುಗಳು ವರದಿಯಾಗಿವೆ. ಮೇ 22 ರಂದು ದೇಶದಲ್ಲಿ ಒಟ್ಟು 257 ಸಕ್ರಿಯ ರೋಗಿಗಳಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

Chitradurga Renukaswamy: ಹತ್ಯೆಯಾಗಿ ಇಂದಿಗೆ ಒಂದು ವರ್ಷ, ಪೂಜೆ ಸಲ್ಲಿಸಿದ ಕುಟುಂಬಸ್ಥರು