Select Your Language

Notifications

webdunia
webdunia
webdunia
webdunia

ಸೋನಿ ಆತ್ಮಹತ್ಯೆ: ಆಪ್ ಶಾಸಕನಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ

ಆಪ್
ನವದೆಹಲಿ , ಸೋಮವಾರ, 1 ಆಗಸ್ಟ್ 2016 (20:01 IST)
ಆಮ್ ಆದ್ಮಿ ಪಕ್ಷದ ಮಹಿಳಾ ಕಾರ್ಯಕರ್ತೆಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆಪ್ ಶಾಸಕ ಶರದ್ ಚೌಹಾನ್‌ಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ಆದೇಶ ನೀಡಿದೆ.
 
ನರೇಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೌಹಾನ್ ಸೇರಿದಂತೆ ಇತರ ಆರೋಪಿಗಳನ್ನು ಕೂಡಾ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆಪ್ ಕಾರ್ಯಕರ್ತೆ ಸೋನಿ ಜುಲೈ 19 ರಂದು ನರೇಲಾ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಚೌಹಾನ್ ಆದೇಶದ ಮೇರೆಗೆ ರಮೇಶ್ ಭಾರಧ್ವಾಜ್ ಆಕೆಗೆ ಕಿರುಕುಳ ನೀಡುತ್ತಿದ್ದನು ಎಂದು ಸೋನಿ ಕುಟುಂಬದ ಸದಸ್ಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.
 
ರಮೇಶ್ ಭಾರಧ್ವಾಜ್ ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಸೋನಿ ಖಿನ್ನತೆಗೆ ಒಳಗಾಗಿದ್ದಳು ಎಂದು ಕುಟುಬಂದ ಸದಸ್ಯರು ಆರೋಪಿಸಿದ್ದಾರೆ. ಪೊಲೀಸರು ಭಾರಧ್ವಾಜ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಭಾರಧ್ವಾಜ್‌ನನ್ನು ಸ್ಥಳೀಯ ಶಾಸಕ ರಕ್ಷಿಸುತ್ತಿದ್ದಾನೆ ಎಂದು ಸೋನಿ ಆರೋಪಿಸಿದ್ದಳು. 
 
ಆಪ್ ಕಾರ್ಯಕರ್ತೆ ಸೋನಿ ಎರಡು ಹೆಣ್ಣುಮಕ್ಕಳ ತಾಯಿಯಾಗಿದ್ದು, ವಾಟ್ಸಪ್ ಸಂದೇಶದಲ್ಲಿ ತಮಗೆ ನ್ಯಾಯ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಳು 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಐಸಿಐ ಬ್ಯಾಂಕ್ ತ್ರೈಮಾಸಿಕ ಫಲಿತಾಂಶ ಕುಸಿತ: ಸಂವೇದಿ ಸೂಚ್ಯಂಕ ಇಳಿಕೆ