Select Your Language

Notifications

webdunia
webdunia
webdunia
webdunia

ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಗಡುವು !

ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಗಡುವು !
ನವದೆಹಲಿ , ಗುರುವಾರ, 15 ಸೆಪ್ಟಂಬರ್ 2022 (08:46 IST)
ನವದೆಹಲಿ : ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ ಅವರು ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗಿದ್ದ ಬಂಗಲೆಯನ್ನು 6 ವಾರದೊಳಗೆ ವಾಪಸ್ ನೀಡುವಂತೆ ದೆಹಲಿ ಹೈಕೋರ್ಟ್ ತಿಳಿಸಿದೆ.

ಏಕಸದಸ್ಯ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ನನಗೆ ಜೀವ ಬೆದರಿಕೆಯಿದೆ. ಹೀಗಾಗಿ ಜನವರಿ 2016ರಿಂದ ವಾಸಿಸುತ್ತಿದ್ದ ಬಂಗಲೆಯನ್ನು ಮರುಹಂಚಿಕೆ ಮಾಡಿ ಎಂದು ಕೋರಿದ್ದ ಸುಬ್ರಮಣಿಯಂ ಸ್ವಾಮಿ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

ಈ ಬಂಗಲೆಯನ್ನು 5 ವರ್ಷಕ್ಕೆ ನೀಡಲಾಗಿದೆ. ಈಗಾಗಲೇ ಅವಧಿಯು ಮುಕ್ತಾಯಗೊಂಡಿದೆ. ಝಡ್ ವರ್ಗದ ಭದ್ರತೆ ಪಡೆದವರಿಗೆ ವಸತಿ ಸೌಕರ್ಯವನ್ನು ಕಡ್ಡಾಯಗೊಳಿಸುವ ಯಾವುದೇ ದಾಖಲೆಯನ್ನು ನ್ಯಾಯಾಲಯಕ್ಕೆ ತೋರಿಸಲಾಗಿಲ್ಲ ಎಂದು ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಸಮಸ್ಯೆಯಿಂದ ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಮೂವರು ಸಾವು