Select Your Language

Notifications

webdunia
webdunia
webdunia
webdunia

ದೇಶದ ಮೊದಲ ಜಲಾಂತರ್ಗಾಮಿ ಮೆಟ್ರೋ ರೈಲಿಗೆ ಚಾಲನೆ

ನರೇಂದ್ರ ಮೋದಿ

geetha

ಕೋಲ್ಕತ್ತಾ , ಬುಧವಾರ, 6 ಮಾರ್ಚ್ 2024 (16:20 IST)
ಕೋಲ್ಕತ್ತಾ :520 ಮೀಟರ್‌ ಉದ್ದದ ಜಲಾಂತರ್ಗಾಮಿ ಮಾರ್ಗವನ್ನು ಮೆಟ್ರೋ ರೈಲು 45 ಕ್ಷಣಗಳಲ್ಲಿ ಕ್ರಮಿಸಲಿದೆ. ಈ ಮಾರ್ಗವು ಕೋಲ್ಕತ್ತಾದ ಅವಳಿ ನಗರಗಳಾದ ಹೌರಾ ಮತ್ತು ಸಾಲ್ಟ್‌ ಲೇಕ್‌ ನಡುವೆ ಸಂಪರ್ಕ ಕಲ್ಪಿಸಲಿದೆ.  ಒಟ್ಟಾರೆ ಇಂದು ಉದ್ಘಾಟನೆಗೊಳ್ಳಲಿರುವ ಮೆಟ್ರೋ ಮಾರ್ಗವು 42 ಕಿಮೀ ದೂರ ಕ್ರಮಿಸಲಿದ್ದು, ಕೊಲ್ಕತ್ತಾ ಪೂರ್ವ- ಪಶ್ಚಿಮ ಮೆಟ್ರೋ ಕಾರಿಡಾರ್‌ ನ ಪ್ರಮುಖ ಭಾಗವಾಗಿದೆ. 

ಭಾರತದ ಮೊತ್ತ ಮೊದಲ ಜಲಾಂತರ್ಗಾಮಿ ಮಾರ್ಗದ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಲಿದ್ದಾರೆ. ಹೂಗ್ಲಿ ನದಿಯ ಒಳಗೆ ಈ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸಲಾಗಿದೆ.

ಇದರೊಂದಿಗೆ ಪ್ರಧಾನಿ ಮೋದಿ ಇಂದು ಕವಿ ಸುಭಾಷ್‌ - ಹೇಮಂತ್‌ ಮುಖ್ಯೋಪಾಧ್ಯಾಯ ಮತ್ತು ತರತಲ ಮಜೆರಾತ್‌ ಮೆಟ್ರೋ ಸೆಕ್ಷನ್‌ ಗಳಿಗೂ ಸಹ ಚಾಲನೆ ನೀಡಲಿದ್ದಾರೆ. ಬಳಿಕ 24 ಪರಗಣ ಜಿಲ್ಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್‌ ನನಗೇ ಸಿಗುವುದು ಶೇ 500 ರಷ್ಟು ಖಚಿತ ಎಂದು ಸಂಸದೆ ಸುಮಲತಾ