Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯ ಬ್ರಹ್ಮಾಸ್ತ್ರ: ಕಪ್ಪು ಹಣ ಹೊಂದಿದವರ, ಭ್ರಷ್ಟರ ಕಥೆ ಫಿನಿಶ್

ಪ್ರಧಾನಿ ಮೋದಿಯ ಬ್ರಹ್ಮಾಸ್ತ್ರ: ಕಪ್ಪು ಹಣ ಹೊಂದಿದವರ, ಭ್ರಷ್ಟರ ಕಥೆ ಫಿನಿಶ್
ನವದೆಹಲಿ , ಸೋಮವಾರ, 26 ಡಿಸೆಂಬರ್ 2016 (16:53 IST)
ಡಿಸೆಂಬರ್30ರ ನಂತರ ಭ್ರಷ್ಟರ ಮತ್ತು ಕಪ್ಪು ಹಣ ಹೊಂದಿದವರು ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಪ್ರಧಾನಿ ಮೋದಿ, ಇದೀಗ ಬ್ರಹ್ಮಾಸ್ತ್ರ ಬಳಸಲು ನಿರ್ಧರಿಸಿದ್ದಾರೆ.    
ಭ್ರಷ್ಟರು ವಿದೇಶಗಳಲ್ಲಿ ಆಸ್ತಿ ಹೊಂದಿರುವ ಸಂಪೂರ್ಣ ಮಾಹಿತಿ ಮೋದಿಯವರಿಗೆ ಲಭಿಸಿದ್ದು, ಭ್ರಷ್ಟರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಸರಕಾರ ನಿರ್ಧರಿಸಿದೆ ಎನ್ನಲಾಗಿದೆ. 
 
ಪೇಟಿಎಂ, ಆಧಾರ ಪೇಮೆಂಟ್ ಆಪ್ಸ್ ಸೇರಿದಂತೆ ಕ್ಯಾಶ್​ ಇಲ್ಲದೇ ಮೊಬೈಲ್​ ಬ್ಯಾಂಕಿಂಗ್​, ಇಂಟರ್​ನೆಟ್​ ಬ್ಯಾಂಕಿಂಗ್​ ಹೀಗೆ ನಾನಾ ಬಗೆಯ ಡಿಜಿಟಲ್​ ತಂತ್ರಜ್ಞಾನಗಳನ್ನು ಬಳಸುವ ಅನಿವಾರ್ಯತೆ ಜನತೆಗೆ ಎದುರಾಗಿದ್ದರಿಂದ ಭ್ರಷ್ಟರ ಲಂಚಬಾಕತನಕ್ಕೆ ತಡೆಯೊಡ್ಡಲಿದೆ. 
 
ಭ್ರಷ್ಟರು ಮತ್ತು ಕಪ್ಪು ಹಣ ಹೊಂದಿದವರು ಖಾಸಗಿ ಮತ್ತು ಸರಕಾರಿ ಸ್ವಾಮ್ಯದ ಬ್ಯಾಂಕ್‌‌ಗಳ ಲಾಕರ್‌ಗಳಲ್ಲಿ ಇಟ್ಟಿರುವ ಮಾಹಿತಿ ಕೂಡಾ ಲಭ್ಯವಾಗಿದ್ದು, ಒಂದು ವೇಳೆ ನಿಖರವಾದ ದಾಖಲೆಗಳನ್ನು ನೀಡದಿದ್ದಲ್ಲಿ ಲಾಕರ್‌ನ್ನು ಮುಟ್ಟುಗೋಲು ಹಾಕಲು ಸರಕಾರ ನಿರ್ಧರಿಸಿದೆ. ಲಾಕರ್ ಹೊಂದಿದ ವ್ಯಕ್ತಿ ಕೃಷ್ಣನ ಜನ್ಮಸ್ಥಾನ ಸೇರಬೇಕಾಗುತ್ತದೆ.
 
ಸರಕಾರಿ ಅಧಿಕಾರಿಗಳ ಕರ್ಮಕಾಂಡಕ್ಕೂ ಬ್ರೆಕ್ ಹಾಕಲು ನಿರ್ಧರಿಸಿರುವ ಪ್ರಧಾನಿ ಮೋದಿ, ಮುಂದಿನ ವರ್ಷದಲ್ಲಿ ಕೆಲ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. ಅಂತೂ ಇಂತೂ ಮಾಡಿದ ಪಾಪಕ್ಕೆ ಬೆಲೆ ತೆರಬೇಕಾದ ಅನಿವಾರ್ಯತೆ ಭ್ರಷ್ಟರಿಗೆ, ಕಪ್ಪು ಹಣ ಹೊಂದಿದವರಿಗೆ ಎದುರಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

'ರಾಜ್ ಲೀಲಾ ವಿನೋದ'ದಲ್ಲಿ ಅಂತದ್ದೇನಿದೆ?