Select Your Language

Notifications

webdunia
webdunia
webdunia
webdunia

ಕೊರೋನಾವೈರಸ್ ಭೀತಿ: ಚೀನಾದವರಿಗೆ ನೋ ಎಂಟ್ರಿ ಎಂದ ದೇಶಗಳು

ಕೊರೊನಾವೈರಸ್
ಬೀಜಿಂಗ್: ಚೀನಾದ ಹಲವೆಡೆ ಕೊರೊನಾವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಜನರ ಜೀವಕ್ಕೆ ಕುತ್ತು ತರುತ್ತಿದೆ. ಇದೀಗ ಚೀನಾ ಯಾತ್ರಿಕರನ್ನು ಬರಮಾಡಿಕೊಳ್ಳಲು ವಿದೇಶಿಗರೂ ಅನುಮಾನಪಡುವಂತಾಗಿದೆ.


ಕೊರೊನಾವೈರಸ್ ಭೀತಿಯಿಂದಾಗಿ ಶ್ರೀಲಂಕಾ ಈಗಾಗಲೇ ಚೀನಾದಿಂದ ಬರುವವರಿಗೆ ಪ್ರವೇಶ ನಿರಾಕರಿಸುತ್ತಿದೆ. ಇದೀಗ ಆಸ್ಟ್ರೇಲಿಯಾ, ಅಮೆರಿಕಾದಂತಹ ಪ್ರಮುಖ ರಾಷ್ಟ್ರಗಳೂ ಚೀನಾ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.

ಭಾರತದಲ್ಲೂ ಚೀನಾದಿಂದ ಬರುವ ಯಾತ್ರಿಕರ ಮೇಲೆ ನಿಗಾ ಇಡಲು ವಿಮಾನ ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಚೀನಾದಲ್ಲಿ ಮಾರಕ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 250 ದಾಟಿದೆ. ಹೀಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳೂ ಕಟ್ಟೆಚ್ಚರ ವಹಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಶೀಲ ಶಂಕಿಸಿದ ಗಂಡ ನಡುರಾತ್ರಿ ಮಾಡಿದ್ದೇನು? ಬಿಗ್ ಶಾಕಿಂಗ್