Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಹಿರಿಯ ಶಾಸಕರಿಗೆ ಕೊರೊನಾ ಪಾಸಿಟಿವ್

ಕೊರೊನಾ ಪಾಸಿಟಿವ್
ಗದಗ , ಸೋಮವಾರ, 28 ಸೆಪ್ಟಂಬರ್ 2020 (12:03 IST)
ಕಾಂಗ್ರೆಸ್ ನ ಹಿರಿಯ ಮುಖ೦ಡರು ಹಾಗೂ ಶಾಸಕರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಗದಗ ಶಾಸಕ ಹೆಚ್‌.ಕೆ.ಪಾಟೀಲ್ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲಿರುವ ಅವರ ಮನೆಯಲ್ಲಿಯೇ ಚಿಕಿತ್ಸೆಯೊಂದಿಗೆ ಕ್ವಾರಂಟೈನ್ ಆಗಿದ್ದಾರೆ.

ಇತ್ತೀಚಿಗೆ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಹೆಚ್.ಕೆ.ಪಾಟೀಲ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ಮೂರು ದಿನಗಳ ಹಿಂದೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದರು.
ಮಹಾರಾಷ್ಟ್ರದ ಪ್ರವಾಸ ನಂಟಿನಿಂದ ಪಾಸಿಟಿವ್ ದೃಢ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.

10 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್ ಆಗಿರುವುದಾಗಿ ತಿಳಿಸಿದ್ದು, ತಮ್ಮ ಸಂಪರ್ಕದಲ್ಲಿ ಇದ್ದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಅಂತ ಶಾಸಕ ಪಾಟೀಲ ವಿನ೦ತಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೇರೆಯವನ ಜೊತೆ ಪ್ರೇಯಸಿ ಇರೋದನ್ನು ನೋಡಿದ ಪಾಗಲ್ ಪ್ರೇಮಿ ಹೀಗಾ ಮಾಡೋದು?