Select Your Language

Notifications

webdunia
webdunia
webdunia
webdunia

ಕೊರೋನಾ ನಿರ್ವಹಣೆ: ಕೇಂದ್ರದ ಸಾಧನೆ ಬಗ್ಗೆ ಪುಸ್ತಕ!

ಕೊರೋನಾ ನಿರ್ವಹಣೆ: ಕೇಂದ್ರದ ಸಾಧನೆ ಬಗ್ಗೆ ಪುಸ್ತಕ!
ನವದೆಹಲಿ , ಬುಧವಾರ, 4 ಆಗಸ್ಟ್ 2021 (16:49 IST)
ನವದೆಹಲಿ(ಅ.04): ಕೋವಿಡ್ ನಿಯಂತ್ರಣ ಮತ್ತು ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಾಧನೆ ಏನೆಂದು ತಿಳಿಸುವ ಕಿರು ಪುಸ್ತಕವೊಂದನ್ನು ಮಂಗಳವಾರ ಬಿಜೆಪಿ ಸಂಸದರಿಗೆ ನೀಡಲಾಯಿತು. ಕೊರೋನಾ ನಿಗ್ರಹ ವಿಚಾರದಲ್ಲಿ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ, ಚುನಾವಣಾ ರಾಜ್ಯಗಳ ಪರವಾಗಿ ಕೆಲಸ ಮಾಡಿದೆ ಎಂದು ವಿಪಕ್ಷಗಳು ಟೀಕಿಸಿದ್ದವು.

ಅದರ ಬೆನ್ನಲ್ಲೇ ಸರ್ಕಾರದ ಸಾಧನೆ ವಿವರಿಸುವ ಪುಸ್ತಕ ಬಿಡುಗಡೆ ಮಾಡಿ ಮಾಹಿತಿ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಪುಸ್ತಕ ಬಿಡುಗಡೆ ಮಾಡಿದೆ.
ಹಾಗೆಯೇ ಜಗತ್ತಿನಲ್ಲಿಯೇ ಭಾರತ ಅತಿ ವೇಗವಾಗಿ ಲಸಿಕೆ ವಿತರಿಸಿದೆ. ಈವರೆಗೆ ಭಾರತ ಸುಮಾರು 45 ಕೋಟಿ ಡೋಸ್ ಲಸಿಕೆ ವಿತರಿಸಿದ್ದರೆ, ಅಮೆರಿಕ 34.3 ಕೋಟಿ, ಬ್ರೆಜಿಲ್ 13.7 ಕೋಟಿ, ಬ್ರಿಟನ್ 8.4 ಕೋಟಿ ಡೋಸ್ ನೀಡಿದೆ. ಜಗತ್ತಿನಲ್ಲಿ ಈವರೆಗೆ ಹಂಚಿಕೆಯಾದ ಲಸಿಕೆ ಪೈಕಿ ಶೇ.10ರಷ್ಟುಲಸಿಕೆಯನ್ನು ಭಾರತವೊಂದೇ ವಿತರಿಸಿದೆ ಎಂಬೆಲ್ಲಾ ಮಾಹಿತಿ ನೀಡಲಾಗಿದೆ.
ಮೋದಿ ಏನೇನು ಮಾಡಿದರು?
10 ಇಷ್ಟು ಸಲ ದೇಶವನ್ನು ಉದ್ದೇಶಿಸಿ ಭಾಷಣ
21 ಇಷ್ಟು ಬಾರಿ ರಾಜ್ಯಗಳ ಜೊತೆ ಸಮಾಲೋಚನೆ
40 ಇಷ್ಟು ಪ್ರಮಾಣದಲ್ಲಿ ಕೋವಿಡ್ ಸಭೆ ನಡೆಸಿದ್ದಾರೆ.
ದೇಶವಾರು ಪಟ್ಟಿ
ಭಾರತ 45.0 ಕೋಟಿ
ಅಮೆರಿಕ 34.3 ಕೋಟಿ
ಬ್ರೆಜಿಲ್ 13.7 ಕೋಟಿ
ಬ್ರಿಟನ್ 8.4 ಕೋಟಿ
34 ಕೋಟಿ ಲಸಿಕೆ ವಿತರಣೆಗೆ ಪಡೆದ ದಿನ
ಭಾರತ 166
ಅಮೆರಿಕ 221


Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಕಡೆಗಣನೆ: ಬೊಮ್ಮಾಯಿ ವಿರುದ್ಧ ಪ್ರತಿಭಟನೆ