ಮಗುವಿನ ಪೋಷಕರು ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಮಗುವಿನ ಜನ್ಮ ಪ್ರಮಾಣ ಪತ್ರ(Birth Certificate) ವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಇದರ ಜೊತೆಗೆ ಫೋಷಕರ ಗುರುತಿನ ಚೀಟಿ (Identity Card) ಹಾಗೂ ಮನೆಯ ವಿಳಾಸದ(Address Proof) ದಾಖಲೆಗಳನ್ನು ಸಹ ನೀಡಬೇಕು.
ಕೇಂದ್ರ ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ಅಲ್ಲದೇ ಭೇಟಿ ಬಚಾವೊ, ಭೇಟಿ ಪಡಾವೋ ಆಂದೋಲನದ ಮೂಲಕ ಬಹಳಷ್ಟು ಕಾರ್ಯಗಳನ್ನು ಸಹ ಮಾಡಿದೆ. ಹಾಗೆಯೇ ಇದೆ ಆಂದೋಲನದ ಅಡಿಯಲ್ಲಿ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯನ್ನು ಪರಿಚಯಿಸಿದೆ. ಇನ್ನು ಭಾರತದ ತೆರಿಗೆ ಕಾಯ್ದೆಯ 80ಅ ಸೆಕ್ಷನ್ ಅಡಿಯಲ್ಲಿ ಬರುವ ಈ ಯೋಜನೆ , ಹೆಣ್ಣು ಮಕ್ಕಳಿಗೆ ಉಳಿತಾಯ ಮಾಡಲು ಸಹಾಯ ಮಾಡುವ ಸಣ್ಣ ಪ್ರಯತ್ನವಾಗಿದೆ. ಹಾಗೆಯೇ ಈ ಸಣ್ಣ ಉಳಿತಾಯ ಯೋಜನೆಯು ಒಳ್ಳೆಯ ಬಡ್ಡಿ ನೀಡುವುದಲ್ಲದೇ, ಆ ಹಣದ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ಸಹ ವಿಧಿಸದಿರುವುದು ಹೆಣ್ಣು ಮಕ್ಕಳಿಗೆ ಸಹಾಯವಾಗುತ್ತದೆ.
ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಹೆಚ್ಚಾಗಿ ಈ ಯೋಜನೆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೇಂದ್ರಿಕರಿಸಿದೆ.ಈ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಗು ಹುಟ್ಟಿದಾಗಿನಿಂದ ಆಕೆಗೆ 10 ವರ್ಷವಾಗುವವರೆಗೆ ಯಾವಾಗ ಬೇಕಾದರೂ ಅಕೌಂಟ್ ತೆರೆಯಬಹುದು. ಅಲ್ಲದೇ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಕೇವಲ 250ರೂಗಳನ್ನು ಕಟ್ಟುವ ಮೂಲಕ ಅಕೌಂಟ್ ಓಪನ್ ಮಾಡಬಹುದು.
ಇನ್ನು ಪ್ರತಿ ವರ್ಷ 250 ರೂಗಳನ್ನು ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಉಳಿತಾಯ ಖಾತೆಯಲ್ಲಿ ಜಮಾ ಮಾಡಬಹುದು. ಹಾಗೆಯೇ ಯೋಜನೆಯ ಪ್ರಕಾರ ವರ್ಷಕ್ಕೆ 1 ಲಕ್ಷದ 50 ಸಾವಿರಗಳನ್ನು ಒಂದು ವರ್ಷದಲ್ಲಿ ಕಟ್ಟಬಹುದು. ಈ ಖಾತೆ ತೆರೆದ 21 ವರ್ಷಗಳ ತನಕ ಅಥವಾ ಹೆಣ್ಣು ಮಗುವಿಗೆ 18 ವರ್ಷ ದಾಟಿ ಆಕೆ ವೈವಾಹಿಕ ಬದುಕಿಗೆ ಕಾಲಿಡುವ ತನಕ ಚಾಲ್ತಿಯಲ್ಲಿರುತ್ತದೆ.
ಈ ಖಾತೆ ತೆರೆಯಲು ನೀವು ಮಾಡಬೇಕಾಗಿರುವುದು ಏನು?
ಮಗುವಿನ ಪೋಷಕರು ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಮಗುವಿನ ಜನ್ಮ ಪ್ರಮಾಣ ಪತ್ರ(Birth Certificate) ವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಇದರ ಜೊತೆಗೆ ಫೋಷಕರ ಗುರುತಿನ ಚೀಟಿ (Identity Card) ಹಾಗೂ ಮನೆಯ ವಿಳಾಸದ(Address Proof) ದಾಖಲೆಗಳನ್ನು ಸಹ ನೀಡಬೇಕು.
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ಹೆಣ್ಣು ಮಗುವಿನ ಹೆಸರಿನಲ್ಲಿಯೇ ತೆರೆಯಬೇಕು, ಹಾಗೂ ಒಂದು ಮಗುವಿನ ಹೆಸರಿನಲ್ಲಿ ಕೇವಲ ಒಂದು ಅಕೌಂಟ್ ಮಾತ್ರ ಓಪನ್ ಮಾಡಲು ಅವಕಾಶವಿದೆ. ಆದರೆ ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದರೆ ಈ ಯೋಜನೆ ಲಾಭ ಪಡೆಯಬಹುದು. ಆಕಸ್ಮಿಕವಾಗಿ ಕುಟುಂಬದಲ್ಲಿ ತ್ರಿವಳಿ ಹೆಣ್ಣುಮಕ್ಕಳು ಹುಟ್ಟಿದರೆ, ಅವರು ಕೂಡ ಈ ಯೋಜನೆಯ ಲಾಭ ಪಡೆಯಬಹುದು.
ಇನ್ನು ವರ್ಷಕ್ಕೆ 250 ರೂಗಳನ್ನು ಕಟ್ಟದಿದ್ದಲ್ಲಿ ಆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ, ಖಾತೆ ನಿಷ್ಕ್ರಿಯಗೊಳ್ಳಲಿದೆ. ಒಂದು ವೇಳೆ ಈ ರೀತಿ ನಿಷ್ಕ್ರಿಯಗೊಂಡರೆ ಖಾತೆ ತೆರೆದ 15 ವರ್ಷದ ಒಳಗೆ 50ರೂ ದಂಡವನ್ನು ಕಟ್ಟಿ ಪುನಃ ಖಾತೆಯನ್ನು ಸಕ್ರಿಯಗೊಳಿಸಿ ಬಳಕೆ ಮಾಡಬಹುದು. ಹಾಗಾಗಿ ಪ್ರತಿ ವರ್ಷ 250 ರೂಗಳನ್ನು ಕಡ್ಡಾಯವಾಗಿ ಖಾತೆಗೆ ಜಮಾ ಮಾಡಬೇಕು. ಇನ್ನು ಈ ಯೋಜನೆಯ ಅಡಿಯಲ್ಲಿ ಯಾವುದೇ ಸಾಲ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ ದೇಶದಲ್ಲಿ ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವ ಉದ್ದೇಶದಿಂದ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದೆ.. ಹಾಗೆಯೇ ಈ ಯೋಜನೆಯಲ್ಲು ಹಲವಾರು ಜನರು ಸದುಪಯೋಗ ಮಾಡಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಜೀವನಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಈ ಯೋಜನೆ ಉತ್ತಮ ಆಯ್ಕೆ.