Select Your Language

Notifications

webdunia
webdunia
webdunia
webdunia

ಚೇತರಿಕೆ ಪ್ರಮಾಣ ಹೆಚ್ಚು, ಕೇಸ್ ಕಡಿಮೆ

ಚೇತರಿಕೆ ಪ್ರಮಾಣ ಹೆಚ್ಚು, ಕೇಸ್ ಕಡಿಮೆ
ನವದೆಹಲಿ , ಮಂಗಳವಾರ, 18 ಮೇ 2021 (12:32 IST)
ನವದೆಹಲಿ: ಕಳೆದ 26 ದಿನಗಳಿಂದ ಸತತವಾಗಿ ಮೂರು ಲಕ್ಷಕ್ಕಿಂತ ಅಧಿಕ ಕೊರೋನಾ ಪ್ರಕರಣಗಳು ದೇಶದಲ್ಲಿ ದಾಖಲಾಗುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ನಿನ್ನೆ 3 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬಂದಿದ್ದು, ಕೊಂಚ ನೆಮ್ಮದಿ ತಂದಿದೆ.
webdunia


ನಿನ್ನೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಕಳೆದ 26 ದಿನಗಳಿಗೆ ಹೋಲಿಸಿದರೆ ನಿನ್ನೆಯೇ ಕಡಿಮೆ ಪ್ರಕರಣಗಳು ಕಂಡುಬಂದಿರುವುದಾಗಿ ಹೇಳಿದ್ದಾರೆ.

ಇನ್ನೊಂದು ಸಮಾಧಾನಕರ ವಿಚಾರವೆಂದರೆ ಇದೀಗ ಚೇತರಿಕೆ ಪ್ರಮಾಣವೂ ಹೆಚ್ಚುತ್ತಿದೆ. ಇದು ಭಾರತದ ಪಾಲಿಗೆ ಶುಭ ಸೂಚನೆ. ಮುಂದಿನ ದಿನಗಳಲ್ಲಿ ಲಸಿಕೆ ಉತ್ಪಾದನೆ ಹೆಚ್ಚಳವಾಗಲಿರುವುದರಿಂದ 18-44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಪ್ರಮಾಣವೂ ಹೆಚ್ಚಳವಾಗಲಿದೆ. ಆಗ ಪ್ರಕರಣಗಳು ಇನ್ನಷ್ಟು ಕಡಿಮೆಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ನಿಯಂತ್ರಣವಾಗಬೇಕು, ಲಾಕ್ ಡೌನ್ ಬೇಡ!